नई दिल्ली, ಏಪ್ರಿಲ್ 1 -- ರಾಜಸ್ಥಾನ್ ರಾಯಲ್ಸ್ ಹಂಗಾಮಿ ನಾಯಕ ರಿಯಾನ್ ಪರಾಗ್ ಮತ್ತೊಮ್ಮೆ ಟ್ರೋಲರ್​​ಗಳ ದಾಳಿಗೆ ಸಿಲುಕಿದ್ದಾರೆ. ಭಾನುವಾರ (ಮಾರ್ಚ್ 30) ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಗುವಾಹಟಿಯ ಬರ್ಸಪರ ಮೈದಾನದ ಸಿಬ್ಬಂದಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಪರಾಗ್ ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ಮೊಬೈಲ್ ಎಸೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ಪಂದ್ಯದ ಮುಕ್ತಾಯಗೊಂಡ ನಂತರ ಸಿಬ್ಬಂದಿ ಸೆಲ್ಫಿ ನೀಡುವಂತೆ ಪರಾಗ್ ಬಳಿ ಕೋರಿದರು. ಅದರಂತೆ ಸೆಲ್ಫಿ ಕೊಟ್ಟ ಬೆನ್ನಲ್ಲೇ ಫೋನ್ ಅನ್ನು ಮೈದಾನದ ಸಿಬ್ಬಂದಿಯ ಕಡೆಗೆ ಎಸೆದರೂ ಅದನ್ನು ಸಿಬ್ಬಂದಿ ಸುಲಭವಾಗಿ ಪಡೆದರೂ ಅಭಿಮಾನಿಗಳು ಪರಾಗ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪರಾಗ್​ರನ್ನು ಟ್ರೋಲ್ ಮಾಡುತ್ತಿದ್ದಾರೆ. ಮೊಬೈಲ್ ಹಾಗೆ ಬಿಸಾಡುವ ಬದಲು ಸಿಬ್ಬಂದಿಯ ಕೈಗೆ ಕೊಡಬಹುದಿತ್ತು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿಎಸ್...