नई दिल्ली, ಮಾರ್ಚ್ 23 -- ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಪಿಚ್​​ ಅತಿಕ್ರಮ ಪ್ರವೇಶ ಮಾಡಿದ 18 ವರ್ಷದ ಅಭಿಮಾನಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಿತುಪರ್ಣೋ ಪಖಿರಾ ಎಂದು ಹೆಸರಿಸಲಾಗಿದ್ದು, ಆತನ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮೂರು ಸೆಕ್ಷನ್ ಹಾಕಲಾಗಿದೆ.

ಕೆಕೆಆರ್ ನೀಡಿದ್ದ 175 ರನ್​ಗಳ ಗುರಿ ಬೆನ್ನಟ್ಟುವಾಗ ರಕ್ಷಣಾ ಬೇಲಿ ಉಲ್ಲಂಘಿಸಿದ ಅಭಿಮಾನಿ ಮೈದಾನಕ್ಕೆ ನುಗ್ಗಿದ್ದ. ರಾತ್ರಿ 10.27ರ ಸುಮಾರಿಗೆ 13ನೇ ಓವರ್​​ನಲ್ಲಿ ಕೊಹ್ಲಿ ಅರ್ಧಶತಕ ಪೂರೈಸಿದಾಗ ಅರ್ಧಶತಕ ಸಿಡಿಸಿದ್ದ ಅವಧಿಯಲ್ಲಿ ಈ ಘಟನೆ ಸಂಭವಿಸಿತ್ತು. ಅರ್ಧಶತಕವನ್ನು ವಿರಾಟ್ ಸಂಭ್ರಮಿಸುತ್ತಿದ್ದರು. ಆಗ ಓಡೋಡಿ ಬಂದ ಅಭಿಮಾನಿ, ನೇರವಾಗಿ ಕಾಲಿಗೆ ಎರಗಿದನು. ಬಳಿಕ ತಮ್ಮ ನೆಚ್ಚಿನ ಆಟಗಾರನನ್ನು ತಬ್ಬಿಕೊಂಡ. ಇದರ ಬೆನ್ನಲ್ಲೇ ಭದ್ರತಾ ಸಿಬ್ಬಂ...