ಭಾರತ, ಮಾರ್ಚ್ 20 -- Nooru Janmaku Serial: ಕಲರ್ಸ್ ಕನ್ನಡ ವಾಹಿನಿ ಮೊದಲಿನಿಂದಲೂ ಅನೇಕ ಪ್ರಥಮಗಳನ್ನು ಮಾಡುತ್ತಾ ಬಂದಿದೆ. ಆ ಪಟ್ಟಿಗೆ ಈಗ ಎರಡೆರಡು ಹೊಸ ಪ್ರಥಮಗಳು ಸೇರಿದೆ. ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿ ಮಂತ್ರಾಲಯದೊಳಗೆ ಚಿತ್ರೀಕರಣ ಮಾಡಿದೆ. ಹಾಗೂ ಪ್ರಪ್ರಥಮ ಬಾರಿಗೆ ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಸೀರಿಯಲ್‌ನಲ್ಲಿ ಅವರೇ ಹರಸಿ ಆಶೀರ್ವದಿಸಿದ್ದಾರೆ. ಹೌದು, ಇದುವರೆಗೆ ಯಾವುದೇ ಮನರಂಜನಾ ವಾಹಿನಿಯಲ್ಲಿ ಮಂತ್ರಾಲಯವನ್ನು ಸಂಪೂರ್ಣವಾಗಿ ತೋರಿಸಿದ್ದಿರಲಿಲ್ಲ. ಆದರೆ ಕಲರ್ಸ್ ಕನ್ನಡ ವಾಹಿನಿ ತನ್ನ ಜನಪ್ರಿಯ ಧಾರಾವಾಹಿ ನೂರು ಜನ್ಮಕೂ ಚಿತ್ರೀಕರಣವನ್ನು ಮಂತ್ರಾಲಯದೊಳಗೆ ಮಾಡಿ ಪ್ರೇಕ್ಷಕರಿಗೆ ಮಂತ್ರಾಲಯದ ದರ್ಶನವನ್ನು ಮಾಡಿಸಲಿದೆ.

ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸ...