ಭಾರತ, ಫೆಬ್ರವರಿ 5 -- ಮೈಕ್ರೋಫೈನಾನ್ಸ್ ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ತುಂಬ ತಮಾಷೆಯಾಗಿದೆ. ಏನು ಮಾಡಬೇಕಿತ್ತೋ ಅದನ್ನು ಮಾಡದೇ, ತನ್ನ ವ್ಯಾಪ್ತಿ ಬರದ್ದನ್ನು ಮಾತ್ರ ಮಾಡಿದೆ! RBI ನಲ್ಲಿ ನೋಂದಣಿ ಮಾಡಿಕೊಂಡಿರುವ ಯಾವ ಹಣಕಾಸು ಸಂಸ್ಥೆಗಳನ್ನೂ ರಾಜ್ಯ ಸರ್ಕಾರ ನಿಯಂತ್ರಿಸುವ ಅವಕಾಶವಿಲ್ಲ. ಆಂಧ್ರದಲ್ಲಿ 2012 ರಲ್ಲಿ ಇದೇ ರೀತಿ ಆರ್‌ಬಿಐ ನಿಯಮವನ್ನು override ಮಾಡುವ ಕಾನೂನು ಮಾಡಿ, ಅದು ಕೋರ್ಟ್‌ನಲ್ಲಿ ನಿಲ್ಲದೇ ರದ್ದಾಗಿತ್ತು.

ಮೈಕ್ರೋಫೈನಾನ್ಸ್ ಸಂಸ್ಥೆಗಳು ಅದಾಗಲೇ ಆರ್‌ಬಿಐನಲ್ಲಿ ನೋಂದಣಿ ಮಾಡಿಕೊಂಡಿರುತ್ತವೆ. ಮತ್ತೆ ಹೊಸದಾಗಿ ಇನ್ನೊಂದು ಪ್ರಾಧಿಕಾರವನ್ನು ರಚಿಸುವುದು ಅನಗತ್ಯ ಹಾಗೂ ಆ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಉಳಿದಂತೆ ಎಲ್ಲ ನಿಯಮಗಳೂ ಆರ್‌ಬಿಐನ ನಿಯಮಾವಳಿಯಲ್ಲೇ ಇದೆ. ಸಾಲಗಾರರಿಗೆ ಸಾಲದ ಎಲ್ಲ ಮಾಹಿತಿಯನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು. ವಸೂಲಿಯನ್ನು ಹೇಗೆ ಮಾಡಬೇಕು, ಯಾವ ಆಧಾರದಲ್ಲಿ ಮೈಕ್ರೋಫೈನಾನ್ಸ್‌ಗಳು ಸಾಲ ನೀಡಬೇಕು ಎಂಬ ಎಲ್ಲದಕ್ಕ...