Nanjanagud, ಜನವರಿ 27 -- ಮೈಸೂರು/ನಂಜನಗೂಡು : ಮೈಕ್ರೋಫೈನಾನ್ಸ್‌ ಕಿರುಕುಳದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ಬೆಳಕಿಗೆ ಬರುತ್ತಿವೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿಯೇ ಹಲವು ಮಹಿಳೆಯರು ಮನೆ ಖಾಲಿ ಮಾಡಿದ ಘಟನೆ ಮುನ್ನವೇ ಒಂದೇ ದಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂಜನಗೂಡು ತಾಲ್ಲೂಕಿನಲ್ಲಿಯೇ ಈ ಪ್ರಕರಣಗಳು ವರದಿಯಾಗಿವೆ. ಮೈಕ್ರೋ ಫೈನಾನ್ಸ್‌ನವರು ನೀಡಿದ ಕಿರುಕುಳದಿಂದಲೇ ನಮ್ಮ ಮನೆಯ ಸದಸ್ಯರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ನಂಜನಗೂಡು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ಘಟನೆ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ. ಸರ್ಕಾರವೂ ಕಠಿಣ ಕ್ರಮವನ್ನು ಕೈಗೊಂಡು ಸಾಲ ಪಡೆದವರು ವಾಪಾಸ್‌ ನೀಡಲು ಕಾಲಾವಕಾಶ ನೀಡುವಂತೆಯೂ ಕುಟುಂಬದವರು ಒತ್ತಾಯಿಸಿದ್ದಾರೆ.

Published by HT Digital Content Services with permission from HT Kannada....