Bengaluru, ಏಪ್ರಿಲ್ 28 -- ಆಗೊಂದು ಕಾಲವಿತ್ತು, ಮೈಕ್ರೋವೇವ್‌ ಓವನ್ ಎನ್ನುವುದು ಐಷಾರಾಮಿ ವಸ್ತು ಎನ್ನಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ಮೈಕ್ರೋವೇವ್‌ ಅನ್ನು ಕಾಣಬಹುದಾಗಿದೆ. ಇದು ಈಗ ಅಡುಗೆಮನೆಯ ಅಗತ್ಯ ವಸ್ತುಗಳ ಸಾಲಿಗೆ ಸೇರಿಕೊಂಡಿದೆ. ಆಹಾರವನ್ನು ಬೇಗ ಬೇಯಿಸುವ, ಬೇಗ ಬಿಸಿ ಮಾಡುವಂತಹ ಅನೇಕ ಕೆಲಸಗಳನ್ನು ಮೈಕ್ರೋವೇವ್‌ ಸುಲಭಗೊಳಿಸಿದೆ. ಕೆಲಸಕ್ಕೆ ಹೋಗುವವರಿಗೆ ಮೈಕ್ರೋವೇವ್‌ ಅನ್ನುವುದು ವರದಾನವಿದ್ದಂತೆ. ಮೈಕ್ರೋವೇವ್‌ನಿಂದ ಅನುಕೂಲ ಎಷ್ಟಿದೆಯೋ, ಅದನ್ನು ಬಳಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ವಾಸ್ತವವಾಗಿ, ಮೈಕ್ರೋವೇವ್‌ನಲ್ಲಿ ಬೇಯಿಸುವಾಗ ಅತ್ಯಂತ ಅಪಾಯಕಾರಿಯಾಗಬಹುದಾದ ಕೆಲವು ವಿಷಯಗಳೂ ಇವೆ. ಅದರಲ್ಲಿ ಬೇಯಿಸಲು ಇಡುವ ಆಹಾರ ಪದಾರ್ಥಗಳಿಂದ ಅದು ಸ್ಪೋಟಗೊಳ್ಳುವ ಅಪಾಯವೂ ಇದೆ. ನೀವು ಮೈಕ್ರೋವೇವ್‌ ಬಳಸುತ್ತಿದ್ದರೆ, ಇಲ್ಲವೇ ಹೊಸದಾಗಿ ಖರೀದಿಸಲು ಬಯಸುತ್ತಿದ್ದರೆ ಈ ಸುರಕ್ಷತಾ ಸಲಹೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದ...