ಭಾರತ, ಫೆಬ್ರವರಿ 5 -- ರಾಜ್ಯದಲ್ಲಿ ಸದ್ಯ ಹೆಚ್ಚು ಸುದ್ದಿಯಲ್ಲಿರುವುದು ಮೈಕ್ರೊ ಫೈನಾನ್ಸ್ ವಿಚಾರ. ಮೈಕ್ರೊ ಫೈನಾನ್ಸ್‌ನಿಂದ ಸಾಲ ಪಡೆದ ಬಡ ಹಾಗೂ ಮಧ್ಯಮ ವರ್ಗದ ಹಲವು ಜನರು, ಸಾಲ ಮರುಪಾವತಿಗಾಗಿ ಮೈಕ್ರೊ ಫೈನಾನ್ಸ್‌ ಸಿಬ್ಬಂದಿಯಿಂದ ನಿರಂತರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಿಬ್ಬಂದಿ ಕಿರುಕುಳ ತಡೆಯಲಾಗದೆ ರಾಜ್ಯದಲ್ಲಿ ಈಗಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಕ್ರೊ ಫೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಕೂಡಾ ಕಾನೂನು ತರಲು ಸಜ್ಜಾಗಿದೆ. ಮೈಕ್ರೊ ಫೈನಾನ್ಸ್‌ನಿಂದ ತೊಂದರೆಗೆ ಒಳಗಾಗಿರುವ ಜನರು, ತಮ್ಮ ಕುಂದುಕೊರತೆಗಳ ಕುರಿತಾಗಿ ದೂರು ನೀಡಬಹುದಾದ ಆರ್‌ಬಿಐ ಮಾನ್ಯತೆ ಹೊಂದಿದ ಸ್ವಾನಿಯಂತ್ರಿತ ಸಂಸ್ಥೆಯೊಂದಿದೆ. ಸಮಸ್ಯೆಗಳ ಕುರಿತಾಗಿ ಮೈಕ್ರೊ ಫೈನಾನ್ಸ್‌ ಇಂಡಸ್ಟ್ರಿ ನೆಟ್ವರ್ಕ್‌ (MFIN) ಟೋಲ್ ಫ್ರೀ ಸಂಖ್ಯೆ 1800 102 1080ಗೆ ಕರೆ ಮಾಡಬಹುದು.

ಎಂಎಫ್‌ಐಎನ್‌ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಮೈಕ್ರೊ ಫೈನಾನ್ಸ್‌ ಇಂಡಸ್ಟ್ರಿ ನೆಟ್ವರ್ಕ್‌ ಎಂಬುದು ಮೈಕ್ರೊ ಫೈನಾನ್ಸ್‌ಗಳಿಗೆ ಸಂಬಂಧಿಸಿದಂತೆ ಆ...