ಭಾರತ, ಮಾರ್ಚ್ 1 -- ಸಾಲ ವಸೂಲಾತಿ ಮಾಡುವ ಸಂದರ್ಭದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದೆ. ಆದರೂ ಕೆಲವು ಕಡೆ ಮೈಕ್ರೋಫೈನಾನ್ಸ್‌ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಾಲವಸೂಲಾತಿಗೆ ಸಂಬಂಧಿಸಿದಂತೆ ಕಿರುಕುಳ ಅನುಭವಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಗ್ರಾಹಕರ ಗೊಂದಲ, ಅನುಮಾನ ಹಾಗೂ ದೂರುಗಳಿಗಾಗಿ ಎಕೆಎಂಐ (AKMI-ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋಫೈನಾನ್ಸ್ ಇನ್ಸ್ಟಿಟ್ಯೂಷನ್ಸ್) ಸಹಾಯವಾಣಿ ಆರಂಭಿಸಿದೆ.

ತನ್ನ ಸದಸ್ಯರಾದ ಮೈಕ್ರೋಫೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಂತ್ರಣದಲ್ಲಿ ಬರುವುದರಿಂದ, ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ ಎಂದು ಎಕೆಎಂಐ ಹೇಳಿದೆ. ಆದರೂ, ಎಕೆಎಂಐ ಗ್ರಾಹಕರ ರಕ್ಷಣೆಯ ವಿಚಾರದಲ್ಲಿ ಆರ್‌ಬಿಐ ನಿಯಮಾವಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಆಶಯಗಳಿಗೆ ಬದ್ಧವಾಗಿದೆ. ಹೀಗಾಗಿ ಸದಾ ಗ್ರಾಹಕರ ಜೊತೆಗಿದ್ದು ಅವರ ದೂರು, ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ಪರಿಹಾರ ...