ಭಾರತ, ಮೇ 13 -- ಕೋಮಲ್‍ ಅಭಿನಯದ 'ಯಲಾ ಕುನ್ನಿ' ಕಳೆದ ವರ್ಷ ಬಿಡುಗಡೆಯಾಗಿ ಹೆಚ್ಚು ಸದ್ದು ಮಾಡದೇ ಮಾಯವಾಯಿತು. ಆ ನಂತರ ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಅವರ ಚಿತ್ರವೊಂದು ಮೇ 30ರಂದು ಬಿಡುಗಡೆಯಾಗುತ್ತಿದೆ. ಹಾಗಂತ ಇದು ಕನ್ನಡ ಚಿತ್ರವಲ್ಲ, ತಮಿಳು ಚಿತ್ರ ಎಂಬುದು ಗೊತ್ತಿರಲಿ.

ಒಂದು ವರ್ಷದ ಹಿಂದೆ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಕೋಮಲ್‍ ಹೇಳಿಕೊಂಡಿದ್ದರು. ಸೋಷಿಯಲ್‍ ಮೀಡಿಯಾದಲ್ಲಿ ತಮಿಳಿನ ಜನಪ್ರಿಯ ನಟು ಪ್ರಭು ಅವರೊಂದಿಗಿನ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಇದೀಗ ಬಿಡುಗಡೆ ಆಗುತ್ತಿರುವುದೇ ಅದೇ ಚಿತ್ರ. ಹೆಸರು 'ರಾಜಪುತ್ರನ್‍'.

'ರಾಜಪುತ್ರನ್‍' ಚಿತ್ರದ ಟ್ರೇಲರ್‍ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಈ ಟ್ರೇಲರ್‌ನಲ್ಲಿ ಕೋಮಲ್‍ ಅವರನ್ನು ಸಹ ನೋಡಬಹುದು. ಬಾಯಲ್ಲಿ ಸಿಗಾರ್‍ ಹಚ್ಚಿಕೊಮಡು, ಕಣ್ಣಿಗೆ ಕೂಲಿಂಗ್‍ ಗ್ಲಾಸ್‍ ಹಾಕಿಕೊಂಡು ಎಂಟ್ರಿ ಕೊಡುವ ದೃಶ್ಯವು ಟ್ರೇಲರ್‌ನಲ್ಲಿದೆ. ಈ ಚಿತ್ರದಲ್ಲಿ ಅವರ ಪಾತ್ರವೇನು? ಹೆಸರೇನು? ಮುಂತಾದ ವಿಷಯಗಳು ಇನ್ನೂ ...