ಭಾರತ, ಮೇ 6 -- ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ಕೇತುವು ತಾನಿರುವ ಕ್ಷೇತ್ರ ಮಾತ್ರವಲ್ಲದೆ ತಾನು ದೃಷ್ಟಿಸುವ ಭಾವಗಳಿಗೆ ಸಹ ತೊಂದರೆ ನೀಡುವ ಸಾಧ್ಯತೆಗಳಿರುತ್ತವೆ. ಕೇತುವು 2025 ರ ಮೇ ತಿಂಗಳ 18 ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ಕೇತುವು ಸಿಂಹರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗೋಚಾರದಲ್ಲಿನ ಯಾವುದೇ ಗ್ರಹಗಳ ಫಲಾಫಲಗಳು ಜನ್ಮಕುಂಡಲಿಯಲ್ಲಿನ ದಶಾಭುಕ್ತಿಗಳನ್ನು ಅವಲಂಭಿಸುತ್ತದೆ. ಕೇತುವಿಗೆ ಶುಭಗ್ರಹಗಳ ಸಂಯೋಗ ಅಥವಾ ದೃಷ್ಟಿ ಇದ್ದಲ್ಲಿ ಉಂಟಾಗುವ ಸಮಸ್ಯೆಗಳ ಪ್ರಮಾಣವು ಕಡಿಮೆ ಆಗುತ್ತದೆ. ಆದರೆ ಕೇತುವಿನಿಂದ ಉಂಟಾಗುವ ಸಮಸ್ಯೆಗಳು ಕ್ಷಣಮಾತ್ರ. ಉತ್ತಮ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಶ್ರೀ ಗಣಪತಿಗೆ ಪೂಜೆಯನ್ನು ಸಲ್ಲಿಸಿದಲ್ಲಿ ಶುಭಫಲಗಳು ದೊರೆಯುತ...