ಭಾರತ, ಮೇ 12 -- ಭಾರತ-ಪಾಕಿಸ್ತಾನ ಸಂಘರ್ಷದ ಕಾರಣ ಒಂದು ವಾರ ತಾತ್ಕಾಲಿಕ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪುನರ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮೇ 17ರಿಂದ ಐಪಿಎಲ್ ಮತ್ತೆ​ ಆರಂಭಗೊಳ್ಳಲಿದ್ದು, ಜೂನ್ 3 ರಂದು ಫೈನಲ್ ನಡೆಯಲಿದೆ. ಲೀಗ್ ಮತ್ತು ಪ್ಲೇಆಫ್ ಸೇರಿ ಉಳಿದ ಪಂದ್ಯಗಳು ಮೇ 17 ರಿಂದ ಜೂನ್ 3 ರವರೆಗೆ 6 ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಮೇ 17 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಪುನರಾರಂಭಗೊಳ್ಳಲಿದೆ.

ಗಡಿ ಭಾಗದ ರಾಜ್ಯಗಳಲ್ಲಿ ಪಾಕಿಸ್ತಾನ ದಾಳಿ ನಡೆಸಿದ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಈ ಪಂದ್ಯವನ್ನು ಈಗ ಮೇ 24ರಂದು ಜೈಪುರದಲ್ಲಿ ಮತ್ತೆ ನಡೆಸಲಾಗುವುದು. ಮೊದಲ ಕ್ವಾಲಿಫೈಯರ್​ ಮೇ 29ರಂದು, ಎಲಿಮಿನೇಟರ್​ ಮೇ 30ರಂದು ನಡೆಯಲಿದೆ. 2ನೇ ಕ್ವಾಲಿಫೈಯರ್​ ಪಂದ...