ಭಾರತ, ಏಪ್ರಿಲ್ 22 -- ಮಲಯಾಳಂ ಒಟಿಟಿ ಸಿನಿಮಾಗಳು: ಕನ್ನಡ ಮಾತ್ರವಲ್ಲದೆ ಭಾರತದ ವಿವಿಧ ಭಾಷಿಕರು ಒಳ್ಳೆಯ ಮಲಯಾಳಂ ಸಿನಿಮಾವಿದ್ದರೆ ಒಟಿಟಿಯಲ್ಲಿ ನೋಡುತ್ತಾರೆ. ಬಹುನಿರೀಕ್ಷಿತ ಮಾಲಿವುಡ್ ಸಿನಿಮಾಗಳು ಮೇ ತಿಂಗಳಲ್ಲಿ ಒಟಿಟಿಗೆ ಬರಲಿವೆ ಎಂಬ ಸೂಚನೆಗಳಿವೆ. ಇವುಗಳಲ್ಲಿ ಬ್ಲಾಕ್‌ಬಸ್ಟರ್ ಚಲನಚಿತ್ರ ಆಲಪ್ಪುಳ ಜಿಮ್ಖಾನಾ ಕೂಡ ಸೇರಿದೆ. ಮುಂದಿನ ತಿಂಗಳು ಒಟಿಟಿಗೆ ಆಗಮಿಸುವ ಸಿನಿಮಾಗಳ ವಿವರ ಇಲ್ಲಿದೆ.

ಮಲಯಾಳಂನ ಸ್ಟಾರ್ ಹೀರೋ ಬಾಸಿಲ್ ಜೋಸೆಫ್ ನಟಿಸಿರುವ ಚಿತ್ರ ಇದು. ಅವರು ಹಾಸ್ಯ ಮತ್ತು ಭಾವನಾತ್ಮಕ ದೃಶ್ಯಗಳೆರಡರಲ್ಲೂ ಎಲ್ಲರ ಗಮನ ಸೆಳೆದ ಶ್ರೇಷ್ಠ ನಟ. ಬಾಸಿಲ್ ನಟಿಸಿರುವ ಈ ಚಿತ್ರ ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅವರ ಪೊನ್ಮನ್ ಚಿತ್ರ ಈಗಾಗಲೇ ಜಿಯೋಹಾಟ್‌ಸ್ಟಾರ್‌ನಲ್ಲಿ ಮತ್ತು ಅವರ ಪ್ರವಿಂಕುಡು ಶೋಪ್ಪು ಚಿತ್ರ ಸೋನಿಲೈವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಾಸ್ಯ ಮತ್ತು ಡಾರ್ಕ್ ಕಾಮಿಡಿ ಪ್ರಕಾರದಲ್ಲಿರುವ ಈ ಸಿನಿಮಾ ಮೇ ತಿಂಗಳಲ್ಲಿ ಒಟಿಟಿಗೆ ಪ್ರವೇಶಿಸಲಿದೆ.

ನಟ ನಸ್ಲೆನ್ ನಟಿಸಿದ...