ಭಾರತ, ಏಪ್ರಿಲ್ 30 -- ಮೇ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ನೀವು ಹೋಗಬಹುದಾದ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನಗರದ ಗದ್ದಲದಿಂದ ದೂರವಾಗಿ ಶಾಂತಿಯುತವಾಗಿ ಸಮಯ ಕಳೆಯಲು ಈ ಸ್ಥಳಗಳು ಉತ್ತಮ.

ಅಲ್ಮೋರಾ, ಉತ್ತರಾಖಂಡ್: ಪ್ರಕೃತಿಯ ಮಡಿಲಿನಲ್ಲಿ ಶಾಂತಿಯುತ ರಜೆಯನ್ನು ಕಳೆಯಲು ಅಲ್ಮೋರಾ ಉತ್ತಮ ಸ್ಥಳವಾಗಿದೆ. ಮೇ ತಿಂಗಳಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಪಚ್ಮರ್ಹಿ, ಮಧ್ಯಪ್ರದೇಶ: ಸತ್ಪುರ ಪರ್ವತ ಶ್ರೇಣಿಯಿಂದ ಸುತ್ತುವರೆದಿರುವ ಪಚಮಡಿ, ಪ್ರಶಾಂತವಾದ ಗಿರಿಧಾಮವಾಗಿದೆ. ಅನೇಕ ಗುಹೆಗಳು, ದೇವಾಲಯಗಳು ಮತ್ತು ದಟ್ಟವಾದ ಕಾಡುಗಳು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿವೆ.

ಚಂಬಾ, ಹಿಮಾಚಲ ಪ್ರದೇಶ: ಚಂಬಾ ಒಂದು ಅದ್ಭುತ ಸ್ಥಳ. ಪ್ರಾಚೀನ ಸರೋವರಗಳು, ಎತ್ತರದ ಪರ್ವತಗಳು ಮತ್ತು ಸುಂದರವಾದ ಸೂರ್ಯಾಸ್ತಗಳು ಇದನ್ನು ಇತರ ಗಿರಿಧಾಮಗಳಿಗಿಂತ ಭಿನ್ನವಾಗಿಸುತ್ತವೆ.

ನಂದಿ ಬೆಟ್ಟ, ಕರ್ನಾಟಕ: ನಂದಿ ಬೆಟ್ಟದ ಆಕರ್ಷಕ ದೃಶ್ಯ ನೋಡಿದರೆ ನಿಮ್ಮ ಮನಸ್ಸು ಸಂತೋ...