Bangalore, ಮಾರ್ಚ್ 2 -- Ugadi Horoscope: ಮೇಷ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಅಶ್ವಿನಿ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಭರಣಿ ನಕ್ಷತ್ರದ 1, 2, 3 ಮತ್ತು 4ನೇ ಪಾದ ಪಾದಗಳು, ಕೃತ್ತಿಕ ನಕ್ಷದ 1ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮೇಷ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಚು, ಚೆ, ಚೊ, ಲ ಆಗಿದ್ದಲ್ಲಿ ನಿಮ್ಮದು ಅಶಿನಿ ನಕ್ಷತ್ರ ಆಗಿರಬಹುದು. ನಿಮ್ಮ ಹೆಸರಿನ ಮೊದಲ ಅಕ್ಷರಗಳು ಲಿ, ಲು, ಲೆ, ಲೊ ಆಗಿದ್ದಲ್ಲಿ ಭರಣಿ ನಕ್ಷತ್ರ ಮತ್ತು ಅ ಆಗಿದ್ದಲ್ಲಿ ಕೃತ್ತಿಕ ನಕ್ಷತ್ರ ಆಗಿರಬಹುದು. ಮೇಷ ರಾಶಿಯು ದ್ವಾದಶ ರಾಶಿ ಚಕ್ರಗಳಲ್ಲಿ ಮೊದಲ ಸ್ಥಾನದಲ್ಲಿರುವ ರಾಶಿ. ಟಗರು ಈ ರಾಶಿಯ ಚಿಹ್ನೆ. ಮಂಗಳ ಗ್ರಹವು ಈ ರಾಶಿಯ ಅಧಿಪತಿ. ಯಾವುದೇ ವಿಚಾರ, ಎಂಥದ್ದೇ ಪರಿಸ್ಥಿತಿಯಲ್ಲಿ ತಮ್ಮ ಅಸ್ತಿತ್ವ ಎದ್ದು ಕಾಣಬೇಕು ಎಂಬ ಬಯಕೆ ಈ ರಾಶಿಯವರಿಗೆ ಸಾಮಾನ್ಯವಾಗಿ ಇರುತ್ತದೆ.

ಮೇಷ ರಾಶಿಯ ಮಹಿಳೆಯರಿಗೆ ಸಾಮಾನ್ಯವಾಗಿ ವಿಶೇಷ ಜನಾಕರ್ಷಕ ಶಕ್ತಿ ಇರುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಗೆಲ...