ಭಾರತ, ಏಪ್ರಿಲ್ 14 -- ಮೇಲುಕೋಟೆ: ಭೂವೈಕುಂಠ ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆಯ ದಿವ್ಯಸನ್ನಿಧಿಯಲ್ಲಿ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಮಹಾಭಿಷೇಕ ವೈಭವದಿಂದ ನೆರವೇರಿತು.

ವೈರಮುಡಿ ಜಾತ್ರಾಮಹೋತ್ಸವದ 10ನೇ ತಿರುನಾಳ್ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಸೌರಮಾನದ ಮೀನಮಾಸದ ಚಿತ್ತಾನಕ್ಷತ್ರದ ಶುಭದಿನವಾದ ಭಾನುವಾರ ವೇದ ಮಂತ್ರಗಳೊಂದಿಗೆ ದ್ವಾದಶಾರಾಧನೆಯ ಮೂಲಕ ಮಹಾಭಿಷೇಕ ನೆರವೇರುವುದರೊಂದಿಗೆ ಹತ್ತುದಿನಗಳಿಂದ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವ ವಿದ್ಯುಕ್ತವಾಗಿ ಸಂಪನ್ನವಾಯಿತು.

ಮುಂಜಾನೆಯೇ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಬ್ರಹ್ಮೋತ್ಸವದಲ್ಲಿ ಯಾವುದೇ ಲೋಪದೋಷಗಳು ನಡೆದಿದ್ದರೂ ಕ್ಷಮಿಸುವಂತ ಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಚಿನ್ನದ ಧ್ವಜ ಸ್ಥಂಭದ ಬಳಿ ವಿಶೇಷ ಪರಿಹಾರ ಹೋಮ ನೆರವೇರಿಸಲಾಯಿತು. ಮೂಲಮೂರ್ತಿ ಉತ್ಸವಮೂರ್ತಿ ಅಳ್ವಾರ್‌ಗಳು ರಾಮಾನುಜಾಚಾರ್ಯರಿಗೆ ಹಾಲು, ಜೇನು, ಮೊಸರು, ಎಳನೀರು, ಅರಿಸಿನ, ಮಂಗಳ ದ್ರವ್ಯಗಳು ಸೇರಿದ ಪವಿತ್ರತೀರ್ಥಗಳಿಂದ ಮಹಾಭಿಷೇಕ ನೆರವೇರಿಸಲಾಯ...