ಭಾರತ, ಏಪ್ರಿಲ್ 16 -- ಮಾತನಾಡಲು ಬಾರದ ಮತ್ತು ಕಿವಿ ಕೇಳಿಸದ ಬಹುಭಾಷಾ ನಟಿ ಅಭಿನಯ ವಿವಾಹ ಸಂಭ್ರಮದಲ್ಲಿದ್ದಾರೆ. ಕೆಲವು ಶಾಸ್ತ್ರಗಳು ಈಗಾಗಲೇ ಪೂರ್ಣಗೊಂಡಿದ್ದು, ಈಗ ಮದರಂಗಿ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ.
ನಟಿ ಅಭಿನಯ ತಮ್ಮ ಮದುವೆಗೂ ಮುನ್ನ ಮೆಹಂದಿ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೇರಳೆ ಬಣ್ಣದ ಲೆಹೆಂಗಾ ಧರಿಸಿ ಚೆಂದವಾಗಿ ಕಂಗೊಳಿಸಿದ್ದಾರೆ.
ಮಾರ್ಚ್ 9ರಂದು ಅಭಿನಯ ಮತ್ತು ವೆಗೆಸನಾ ಕಾರ್ತಿಕ್ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾವಿ ಪತಿಯ ಮುಖ ತೋರಿಸದೆ, ಎರಡೂ ಕೈಗಳ ಫೋಟೋದೊಂದಿಗೆ ಉಂಗುರ ವಿನಿಮಯ ಪೂರ್ಣಗೊಂಡಿದೆ ಎಂಬ ಸಂತೋಷದ ಸುದ್ದಿಯನ್ನು ಅಭಿನಯ ಹಂಚಿಕೊಂಡಿದ್ದರು.
"ನಾವಿಬ್ಬರೂ ಶಾಲಾ ದಿನಗಳಿಂದಲೂ ಸ್ನೇಹಿತರು. ಅಂದಿನಿಂದಲೇ ಒಬ್ಬರನ್ನೊಬ್ಬರು ಅರಿತಿದ್ದೇವೆ ಎಂದು ಸಂದರ್ಶನದಲ್ಲಿ ಅಭಿನಯ ಹೇಳಿಕೊಂಡಿದ್ದರು.
ಹುಟ್ಟಿನಿಂದಲೇ ಮಾತು ಮತ್ತು ಶ್ರವಣ ದೋಷದಿಂದ ಬಳಲುತ್ತಿದ್ದರೂ, ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂದು ಸಾಬೀತುಪಡಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಅಭಿನಯ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.