ಭಾರತ, ಫೆಬ್ರವರಿ 18 -- ಮಕ್ಕಳು, ವಯಸ್ಕರು ಮಾತ್ರವಲ್ಲ ಹಿರಿಯರು ಕೂಡ ಅಪಸ್ಮಾರದಿಂದ (ಮೂರ್ಛೆ ರೋಗ) ಬಳಲುತ್ತಿದ್ದಾರೆ. ಈ ರೋಗವನ್ನು ಫಿಟ್ಸ್ ಎಂದು ಕೂಡ ಕರೆಯುತ್ತಾರೆ. ಮೆದುಳಿನ ಜೀವಕೋಶಗಳ ಅಸಹಜ ಚಟುವಟಿಕೆಯಿಂದ ಅಪಸ್ಮಾರ ಉಂಟಾಗುತ್ತದೆ. ಈ ಬಗ್ಗೆ ಅನೇಕರಿಗೆ ಮಾಹಿತಿಯಿರುವುದಿಲ್ಲ. ಇದು ಎಲ್ಲರೂ ಕೂಡ ತಿಳಿದಿರಬೇಕಾದುದು ಅಗತ್ಯ. ಮಕ್ಕಳು ಫಿಟ್ಸ್ ಸಮಸ್ಯೆಯಿಂದ ಹೆಚ್ಚು ಬಳಲುತ್ತಿರುವುದು ಕಳವಳಕಾರಿಯಾಗಿದೆ. ಈ ಬಗ್ಗೆ ಬೆಂಗಳೂರಿನ ಯಶವಂತಪುರದಲ್ಲಿರುವ ಮಣಿಪಾಲ ಆಸ್ಪತ್ರೆಯ ನ್ಯೂರೋಲೋಜಿಸ್ಟ್ ಮತ್ತು ಎಪಿಲೆಪ್ಟಾಲಾಜಿಸ್ಟ್ ಡಾ. ಕಿಶೋರ್ ಕೆ.ವಿ. ಮಾಹಿತಿ ನೀಡಿದ್ದಾರೆ. ಮುಂದಿರುವುದುದು ಕಿಶೋರ್ ಅವರ ಬರಹ.

ಮೆದುಳಿನಲ್ಲಿ ಹಠಾತ್, ಅಸಾಮಾನ್ಯ ವಿದ್ಯುತ್ ಚಟುವಟಿಕೆ ಆದಾಗ ಅಪಸ್ಮಾರ ಅಥವಾ ಫಿಟ್ಸ್ ಸಂಭವಿಸುತ್ತವೆ. ಯಾರಾದರೂ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಅಪಸ್ಮಾರಕ್ಕೆ ಒಳಗಾಗಬಹುದು. ಅಪಸ್ಮಾರ ಹೇಗೆ ಉಂಟಾಗುತ್ತದೆ ಎಂಬುದು ಅದು ಮೆದುಳಿನಲ್ಲಿ ಎಲ್ಲಿಂದ ಪ್ರಾರಂಭವಾಗುತ್ತದೆ, ಹೇಗೆ ಹರಡುತ್ತದೆ ಮತ್ತು ಎಷ್ಟು...