Bengaluru, ಏಪ್ರಿಲ್ 19 -- ದೇಶದ ಜನನಿಬಿಡ ಪ್ರದೇಶಗಳಾದ ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಇದೀಗ ಮರಗಳು ಕಣ್ಮರೆಯಾಗಿ ಬೃಹತ್ ಕಟ್ಟಡಗಳಿಂದ ಕೂಡಿದ ಕಾಂಕ್ರೀಟ್ ಮತ್ತು ಉಕ್ಕಿನ ನಗರವಾಗಿ ಪರಿವರ್ತನೆಯಾಗಿದೆ. ಈ ಪ್ರದೇಶದ ಜನರು ಹಸಿರನ್ನು ಕಣ್ತುಂಬಿಕೊಳ್ಳಲು ಮನೆಯಲ್ಲೇ ಉದ್ಯಾನವನ ನಿರ್ಮಿಸುತ್ತಿರುವುದು ಇತ್ತೀಚೆಗೆ ಟ್ರೇಂಡ್ ಆಗಿದೆ. ಅದಾಗ್ಯೂ ತಮ್ಮ ಸುಸ್ಥಿರ ಜೀವನವನ್ನು ಸಾಗಿಸಲು ಮೇಲ್ಛಾವಣಿ, ಬಾಲ್ಕನಿ ಮತ್ತು ವರ್ಟಿಕಲ್ ಉದ್ಯಾನವನಗಳನ್ನಾಗಿ ತಮ್ಮಿಷ್ಟದಂತೆ ನಿರ್ಮಿಸುತ್ತಿರುವುದು ನಿಜಕ್ಕೂ ಸುಂದರ ಮತ್ತು ಪ್ರಶಂಸನೀಯ ಕಾರ್ಯವಾಗಿದೆ.

ಗಾರ್ಡನ್ ಬೆಳೆಸಲು ಸ್ಥಳಾವಕಾಶವಿಲ್ಲದೇ ಕಟ್ಟಡಗಳ ನಿರ್ಮಾಣಕ್ಕೆ ಪ್ರೀಮಿಯಂ ಆಗಿರುವ ದೆಹಲಿಯಂತ ಪ್ರದೇಶಗಳಲ್ಲಿ ಈ ರೂಫ್‌ಟಾಪ್ ಗಾರ್ಡನ್ ಮನೆಮಾತಾಗಿದೆ. ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ತಮಗಿಷ್ಟವಾದ ಹೂ, ತರಕಾರಿ, ಶೋ ಗಿಡಗಳನ್ನು ಬೆಳೆಸಬಹುದಾಗಿದೆ. ಹಚ್ಚಹಸುರಿನ ಹುಲ್ಲಿನ ಹಾಸಿಗೆಯಿಂದ ಹಿಡಿದು ಅಗತ್ಯ ತರಕಾರಿ ಬೆಳೆಯುವ ತಾಣಗಳಾಗುತ್ತಿದೆ. ಇದು ಹೆಚ್ಚು ಬಿಸಿಲಿನ ತಾಪವನ್ನು ಕ...