Bangalore, ಫೆಬ್ರವರಿ 12 -- Bangalore Metro fare: ಮೆಟ್ರೊ ಪ್ರಯಾಣ ದರವನ್ನು ಹೆಚ್ಚಳ ಮಾಡಿದ ಒಂದು ದಿನದ ನಂತರ ಮೆಟ್ರೊದಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.4ರಷ್ಟು ಕಡಿಮೆಯಾಗಿದೆ. ಇದು ಮೆಟ್ರೊದಿಂದ ಪ್ರಯಾಣಿಕರು ಮೆಟ್ರೊದಿಂದ ಇಳಿಮುಖವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಬಿಎಂಆರ್‌ ಸಿಎಲ್‌ ಮೂಲಗಳ ಪ್ರಕಾರ ಸಾಮಾನ್ಯವಾಗಿ ಪ್ರತಿ ಸೋಮವಾರಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ 2025 ರ ಫೆಬ್ರವರಿ 10 ರ ಸೋಮವಾರ ಶೇ.4ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕರು ಮೆಟ್ರೊದಿಂದ ದೂರ ಸರಿಯುತ್ತಿದ್ದಾರೆ ಎಂಬ ವಾದವನ್ನು ಬಿಎಂಆರ್‌ ಸಿಎಲ್‌ ಒಪ್ಪುತ್ತಿಲ್ಲ. ಬೆಂಗಳೂರಿನ ಜನತೆ ಏರ್‌ ಶೋಗೆ ತೆರಳುತ್ತಿದ್ದು ಸಹಜವಾಗಿಯೇ ನಮ್ಮ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ವಾದಿಸುತ್ತಿದೆ.

ಗರಿಷ್ಠ ಪ್ರಯಾಣ ದರ 90 ರೂ. ತಲುಪಿದ್ದು, ಇಡೀ ದೇಶದಲ್ಲೇ ನಮ್ಮ ಮೆಟ್ರೊ ದುಬಾರಿಯಾಗಿದ್ದು, ಇದು ದೂರ ಸರಿಯುತ್ತಿರುವುದರ ಮುನ್ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಮ್ಮ ಮೆ...