ಭಾರತ, ಜೂನ್ 19 -- ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಪ್ರೀತಿಯಿಂದ ಕಟ್ಟಿಸಿದ ಮನೆ ಕುಟುಂಬದ ಎಲ್ಲ ಸದಸ್ಯರಿಗೂ ಸಂತೋಷವನ್ನುಂಟು ಮಾಡುತ್ತಿರಬೇಕು. ಅಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳಿಗೆ ಜಾಗವಿರಕೂಡದು. ಧನಾತ್ಮಕ ಶಕ್ತಿ ಮನೆಯಲ್ಲಿ ತುಂಬಿರುವಂತಿರಬೇಕು. ಆದ್ದರಿಂದ ಸಾಮಾನ್ಯವಾಗಿ ಎಲ್ಲರೂ ವಾಸ್ತು ಪ್ರಕಾರವೇ ಮನೆ ಕಟ್ಟಲು ಮುಂದಾಗುತ್ತಾರೆ. ವಾಸ್ತು ಶಾಸ್ತ್ರವನ್ನು ಸರಿಯಾಗಿ ಪಾಲಿಸುವುದರಿಂದ ಸದ್ಯದ ಸಮಸ್ಯೆಗಳು ಸಹ ದೂರವಾಗುತ್ತವೆ. ಮನೆ ಕಟ್ಟುವಾಗ ಮನೆಯ ಪ್ರತಿ ಕೊಠಡಿ, ಮುಂಭಾಗ, ಕಿಟಕಿ ಎಲ್ಲವನ್ನು ವಾಸ್ತು ಪ್ರಕಾರವೇ ನಿರ್ಮಿಸಲಾಗುತ್ತದೆ. ಭಾರವಾದ ವಸ್ತುವನ್ನು ಯಾವ ದಿಕ್ಕಿಗೆ ಇಡಬೇಕು, ಹಾಸಿಗೆ ಯಾವ ದಿಕ್ಕಿಗೆ ಇರಬೇಕು, ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು, ಹೀಗೆ ಪ್ರತಿಯೊಂದನ್ನು ಪರಿಗಣಿಸಲಾಗುತ್ತದೆ. ಆದರೂ ಕೆಲವು ತಪ್ಪುಗಳನ್ನು ತಿಳಿದೋ ಅಥವಾ ತಿಳಿಯದೆಯೋ ಮಾಡಲಾಗುತ್ತದೆ. ಅದರಿಂದ ವಾಸ್ತು ದೋಷ ಉಂಟಾಗುತ್ತದೆ. ಅವುಗಳನ್ನು ಸರಿಪಡಿಸಿದರೆ ತೊಂದರೆಯಿಂದ ಹೊರಬರಬಹುದು. ಬಹಳಷ್ಟು ಮನೆಗಳಲ್ಲಿ ಎಲ್ಲವನ್ನ...