ಭಾರತ, ಏಪ್ರಿಲ್ 18 -- ಹಿಂದೆಲ್ಲಾ ಮನೆಗೆ ನೆಂಟರು ಬಂದರು ಎಂದರೆ ಅದೇನೋ ಸಂಭ್ರಮ, ಸಡಗರ, ಉಪಚಾರ. ಆದರೆ ಇಂದು? ಉಪಚಾರ ಮಾಡುವುದಿರಲಿ ಸರಿಯಾಗಿ ಮುಖಕ್ಕೆ ಮುಖ ಕೊಟ್ಟು ಮಾತನಾಡುವವರೂ ಇಲ್ಲ. ಈಗಿನ ಯುವಜನಾಂಗಕ್ಕೆ ಸಂಬಂಧಗಳ ಮೌಲ್ಯ ಮೊದಲೇ ತಿಳಿದಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಅಳವಡಿಸಿಕೊಂಡ ಮೆಟೀರಿಯಲಿಸ್ಟಿಕ್ ಬದುಕು ಸಂಬಂಧ, ಆತ್ಮೀಯತೆ, ಆಪ್ತಭಾವವನ್ನೇ ಮರೆಯಾಗಿಸಿದ್ದು ಸುಳ್ಳಲ್ಲ. ಈ ಬಗ್ಗೆ ಆಪ್ತವಾಗಿ ಬರೆದಿದ್ದಾರೆ ಲೇಖಕ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ. ಅವರ ಬರಹ ಇಲ್ಲಿದೆ ನೀವು ಓದಿ.

ನಾವು ಚಿಕ್ಕ ಮಕ್ಕಳಿದ್ದಾಗ ಮನೆಗೆ ಯಾರೇ ಬರಲಿ, ಅಪ್ಪ ಅಮ್ಮ ನಮ್ಮನ್ನು ಕೂಗಿ ಕರೆಯೋರು. ಇಲ್ಲಿ ಬಾ, ಯಾರು ಬಂದಿದ್ದಾರೆ ನೋಡು ಎನ್ನೋರು. ಇವರು ಯಾರು ಗೊತ್ತೇನು? ಎಂದು ಕೇಳೋರು. ನಾವು ಗೊತ್ತಿಲ್ಲ ಎಂದು ತಲೆ ಅಡ್ಡಡ್ಡ ಅಡಿಸಿದಾಗ ಇವರು ಇಂಥವರು, ಸ್ನೇಹಿತ, ಬಂಧು, ನೆಂಟ, ನೆರೆಯವರು ಎಂದೆಲ್ಲಾ ಪರಿಚಯಿಸೋರು. ನಮ್ಮ ಅವರ ಸಂಬಂಧ ವಿವರಿಸೋರು.

ಮುಂದಿನ ಬಾರಿ ಅವರು ಬಂದಾಗ ನಾವೇ ಎದ್ದು ಹೋಗಿ ಬರಮಾಡಿಕೊಳ್ಳೋರು.

ಹೀಗೇ ...