Bangalore, ಜನವರಿ 26 -- ನಿಯೋಜನೆ ಮತ್ತು ಅನ್ಯ ಕರ್ತವ್ಯದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಸರಕಾರ ಆದೇಶಿಸಿದೆ. ಇಂಥ ಆದೇಶ ಹೊಸದಲ್ಲ. ಆದರೆ ಇದುವರೆಗೂ ಪಾಲನೆ ಸಮರ್ಪಕವಾಗಿ ಆಗಿಲ್ಲ ಎಂಬ ಹಿನ್ನೆಲೆಯಲ್ಲಿ ಮತ್ತೊಂದು ಆದೇಶ ಹೊರಟಿದೆ. 2023 ಮತ್ತು 2024ರಲ್ಲೂ ಇಂಥ ಆದೇಶ ಬಂದಿತ್ತು. ಈಗ ಮತ್ತೊಂದು ಬಂದಿದೆ. ಪಾಲನೆಯಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆ.ಡಿಸಿ ಕಚೇರಿ, ಎಸಿ ಕಚೇರಿ, ತಹಸೀಲ್ದಾರ್ ಕಚೇರಿಗಳಲ್ಲೂ ಸಿಬ್ಬಂದಿ ಕೊರತೆ ಇದೆ. ಇಲ್ಲಿ ನಿಯೋಜನೆಗೊಂಡವರನ್ನು ಏಕಾಏಕಿ ಫೀಲ್ಡಿಗೆ ಹಾಕಿದರೆ, ಕೆಲಸ ಮಾಡುವುದು ಯಾರು? ಎಲ್ಲಾ ಏರುಪೇರು ಎಂಬುದು ತಾಲೂಕು ಆಡಳಿತ ನಡೆಸುವ ಅಧಿಕಾರಿಗಳ ತಲೆನೋವು. ಗ್ರಾಮಕರಣಿಕ (ವಿಎ) ಬದಲಾಗಿ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಎಂಬ ಹೆಸರು ಬದಲಾಗಿದ್ದರೂ ಕೆಲಸ ನಾಲ್ಕು ಪಟ್ಟಾಗಿದೆ. ಅದನ್ನು ಮಾಡಲು ಸಿದ್ಧರಿದ್ದರೂ ಪೂರಕವಾದ ಯಾವುದೇ ವ್ಯವಸ್ಥೆಯನ್ನು ಸರಕಾರ ಒದಗಿಸಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕ...