ಭಾರತ, ಮಾರ್ಚ್ 8 -- 2025ರ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಸತತ 2ನೇ ಐಸಿಸಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದರೆ, ನ್ಯೂಜಿಲೆಂಡ್ 25 ವರ್ಷಗಳ ಕನಸನ್ನು ಮತ್ತೊಮ್ಮೆ ನನಸಾಗಿಸಲು ಎದುರು ನೋಡುತ್ತಿದೆ. ಏತನ್ಮಧ್ಯೆ, ನ್ಯೂಜಿಲೆಂಡ್ ತಂಡದಲ್ಲಿರುವ ಭಾರತ ಮೂಲದ ಆಟಗಾರ ಈಗ ಫೈನಲ್‌ನಲ್ಲಿ ಟೀಮ್ ಇಂಡಿಯಾಕ್ಕೆ ದೊಡ್ಡ ಕಂಟಕವಾಗಲಿದ್ದಾರೆ. ಪ್ರಸ್ತುತ ಈತನ ಫಾರ್ಮ್ ನೋಡಿದರೆ ರೋಹಿತ್ ಪಡೆಗೆ ಶನಿಯಂತೆ ಕಾಡಲಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಫೈನಲ್​ನಲ್ಲಿ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಭಯ ಹುಟ್ಟಿಸಿರುವ ಆಟಗಾರ ಎಂದರೆ ನ್ಯೂಜಿಲೆಂಡ್‌ ಯುವ ಆಟಗಾರ ರಚಿನ್ ರವೀಂದ್ರ. ಭಾರತೀಯ, ಅದರಲ್ಲೂ ಬೆಂಗಳೂರು ಮೂಲದ ಆಟಗಾರನಾದ ಈತ, 1999ರ ನವೆಂಬರ್ 18ರಂದು ಕಿವೀಸ್ ನಾಡಿನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದರು. ಆದರೆ ಅವರ ಪೋಷಕರು ಬೆಂಗಳೂರಿನವರಾದರೂ ರಚಿನ್ ಜನಿಸುವ ಮೊದಲೇ ಭಾರತದಿಂದ ನ್ಯೂಜಿಲೆಂಡ್‌ಗೆ ತೆರಳಿ ಅಲ್ಲಿ ನೆಲೆಸಿದ್ದರು. ಅವರ ...