ಭಾರತ, ಏಪ್ರಿಲ್ 15 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮುಕ್ತಾಯದ ಬಳಿಕ ಭಾರತೀಯ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯುಸಿಯಾಗಲಿದೆ. ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಟೀಮ್ ಇಂಡಿಯಾ ವೈಟ್ ಬಾಲ್ ಕ್ರಿಕೆಟ್​ ಆಡಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಂಗಳವಾರ (ಏಪ್ರಿಲ್ 15) ಬಾಂಗ್ಲಾದೇಶ ಪ್ರವಾಸದ ಬಿಳಿ ಚೆಂಡು ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಭಾರತ ತಂಡವು ಆಗಸ್ಟ್ 17 ರಿಂದ 31 ರವರೆಗೆ ಎರಡು ಸ್ಥಳಗಳಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳ ಸರಣಿ ಆಡಲಿದೆ. ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ. ಆದರೆ ಇಂಗ್ಲೆಂಡ್ ಪ್ರವಾಸದ ಬಳಿಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡದಿದ್ದರೆ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಸೂರ್ಯ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಎರಡು ಏಕದಿನ ಮತ್ತು ಕೊನೆಯ ಎರಡು ಟಿ20 ಪಂದ್ಯಗಳು ಮೀರ್​ಪುರ್​ನಲ್ಲಿ ನಡೆದರೆ, ಮೂರನೇ ಏಕದಿನ ಮತ್ತು ಮೊದಲ ಟಿ20 ಚಿತ...