ಭಾರತ, ಏಪ್ರಿಲ್ 29 -- ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಶ್ರೀಲೀಲಾ ಅವರಿಗೆ ಮಕ್ಕಳ ಮೇಲೆ ವಿಶೇಷ ಪ್ರೀತಿ, ಮಮತೆ. ಇದೀಗ ಇವರು ಮೂರನೇ ಮಗುವಿಗೆ ಅಮ್ಮನಾಗಿದ್ದಾರೆ. ಹೆಣ್ಣು ಮಗುವನ್ನು ಇವರು ದತ್ತು ಪಡೆದಿದ್ದು, ಮುದ್ದಾದ ಮಗಳ ಹೃದಯಸ್ಪರ್ಶಿ ಫೋಟೋಗಳನ್ನು ಮತ್ತು ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಅನಾಥಾಶ್ರಮದಿಂದ ಗುರು, ಶೋಭಿತಾ ಎಂಬ ಇಬ್ಬರು ವಿಶೇಷಚೇತನ ಮಕ್ಕಳನ್ನು ದತ್ತು ಪಡೆದಿದ್ದರು.

ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರೀಲೀಲಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ಮನೆಗೆ ಹೊಸ ಸೇರ್ಪಡೆ' ಎಂದು ತನ್ನ ಮೂರನೇ ಮಗುವನ್ನು ಪರಿಚಯಿಸಿದ್ದಾರೆ. ಈ ಮಗುವನ್ನು ನಟಿ ಅತಿಯಾಗಿ ಮುದ್ದು ಮಾಡುತ್ತಿರುವುದು ವಿಡಿಯೋದಲ್ಲಿದೆ. ಕಿಸ್‌ ಕಿಸ್ಸಿಕ್‌ ಹಾಡಿಗೆ ಮಗುವಿನೊಂದಿಗೆ ನಟಿ ಶ್ರೀಲೀಲಾ ಪೋಸ್‌ ನೀಡಿದ್ದಾರೆ. "ಮನೆಗೆ ಬರುವೆಯಾ" ಎಂದು ಆ ಮಗುವನ್ನು ಮುದ್ದೆಗೆರೆಯುತ್ತ ನಟಿ ಪ್ರೀತಿಸುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈಕೆಯ ಈ ವಿಡಿಯೋ ಮ...