ಭಾರತ, ಮಾರ್ಚ್ 12 -- ಮಂಗಳೂರು: ಎರಡು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರೀವ೯ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಮತ್ತು ಮಧ್ಯ ವಯಸ್ಸಿನ ವ್ಯಕ್ತಿ ಸಹಿತ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿ ಪೊಕ್ಸೋ ಪ್ರಕರಣ ದಾಖಲಿಸಿದ್ದಾರೆ. ಪ್ರಾಂತ್ಯ ಗ್ರಾಮದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಹಾಗೂ ಆಲಂಗಾರು ಉಮಿಯದ ಪವನ್ (19) ಎಂಬವವರು ಬಂಧಿತ ಆರೋಪಿಗಳು.

ಪ್ರಾಂತ್ಯ ಅಜಂಕಲ್ಲುವಿನ ಪ್ರಕಾಶ್ ಎಂಬಾತ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಲಕಿಯ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವಷ೯ದಿಂದ ಬರುತ್ತಿದ್ದು ಈ ಸಂದಭ೯ ಸಂತ್ರಸ್ತೆ ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುತ್ತಾನೆ ಈ ಬಗ್ಗೆ ಸಂತ್ರಸ್ತೆಯ ಹೆತ್ತವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು.

ಇನ್ನೊಂದು ಪ್ರಕರಣ : ಮಾ. 8ರಂದು ಟ್ಯೂಶನ್ ಮುಗಿಸಿ ಸೈಕಲ್ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಆಲಂಗಾರು ಉಳಿಯದ ನಿವಾಸಿ ಪವನ್ ಎಂಬಾತ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಆಕ...