ಭಾರತ, ಫೆಬ್ರವರಿ 19 -- ಮಂಗಳೂರು: ಮೂಗಿನಿಂದ ರಕ್ತಸ್ರಾವವಾಗುವುದನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಇದಕ್ಕೇನು ಕಾರಣ, ಇದಕ್ಕೆ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಬಗ್ಗೆ ಮಂಗಳೂರಿನ ಖ್ಯಾತ ದಂತವೈದ್ಯ ಡಾ. ಮುರಲೀಮೋಹನ್ ಚೂಂತಾರು ಮಾಹಿತಿ ಹಂಚಿಕೊಂಡಿದ್ದಾರೆ. ವೈದ್ಯ ಮುರಲೀ ಮೋಹನ್ ಚುಂತಾರು ಬರೆದಿರುವ ಬರಹ ಇಲ್ಲಿದೆ.

ಮೂಗಿನಿಂದ ರಕ್ತಸ್ರಾವವಾಗುವುದನ್ನು ಆಂಗ್ಲಭಾಷೆಯಲ್ಲಿ ಎಪಿಸ್ಟಾಕ್ಸಿಸ್ ಎಂದು ಕರೆಯುತ್ತಾರೆ. ಮೂಗಿನೊಳಗಿನಿಂದ ಹರಿದು ಬರುವ ರಕ್ತ ಮುಂಭಾಗದ ಹೊರಳೆಗಳ ಮುಖಾಂತರ ಹೆಚ್ಚಾಗಿ ಬರುತ್ತದೆ. ಇದನ್ನು ಮುಂಭಾಗದ ಮೂಗಿನ ರಕ್ತಸ್ರಾವ ಎಂದೂ, ಹಿಂಭಾಗದಲ್ಲಿ ಬಾಯಿಯೊಳಗೆ ಉಂಟಾಗುವ ರಕ್ತಸ್ರಾವವನ್ನೂ ಹಿಂಭಾಗದ ಮೂಗಿನ ರಕ್ತಸ್ರಾವ ಎಂದೂ ಕರೆಯುತ್ತಾರೆ. ಮೂಗಿನಲ್ಲಿ ರಕ್ತಸ್ರಾವ ಸರ್ವೇ ಸಾಮಾನ್ಯವಾಗಿದ್ದು, ಶೇಕಡಾ 60ರಷ್ಟು ಮಂದಿ ಜೀವನದಲ್ಲಿ ಒಮ್ಮೆಯಾದರೂ ಈ ಅನುಭವವನ್ನು ಹೊಂದಿರುತ್ತಾರೆ.

ಈ ರೀತಿ ಉಂಟಾಗುವ ಬಹುತೇಕ ರಕ್ತಸ್ರಾವಗಳು ತನ್ನಿಂತಾನೇ ನಿಲ್ಲುತ್ತವೆ. ಕೇವಲ ಶೇ. 10 ರಷ್ಟು ಜನರಲ್ಲಿ ಗಂಭಿರ ಪರಿಣಾಮ ಉಂಟುಮ...