ಭಾರತ, ಮೇ 8 -- Bhamaa Divorce: ಸಿನಿಮಾರಂಗದಲ್ಲಿ ಕಲಾವಿದರ ಬಣ್ಣದ ಬದುಕು ಎಷ್ಟು ಕಲರ್‌ಫುಲ್‌ ಆಗಿ ಕಾಣತ್ತದೆಯೋ, ಅದರ ಹಿಂದೆ ಅಷ್ಟೇ ಕಹಿ ನೋವುಗಳೂ ಅಡಗಿರುತ್ತವೆ. ಸೆಲೆಬ್ರಿಟಿ ಎಂಬ ಕಾರಣಕ್ಕೋ ಏನೋ ಇವರ ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗುತ್ತವೆ. ಅದರಲ್ಲೂ ಮದುವೆ ವಿಚಾರ, ಡಿವೋರ್ಸ್‌ ಸುದ್ದಿಯಂತೂ ಅಷ್ಟೇ ವೇಗವಾಗಿಯೇ ಸದ್ದು ಸುದ್ದಿಯಾಗುತ್ತದೆ. ಈಗ ಕನ್ನಡದ ಸಿನಿಮಾಗಳಲ್ಲೂ ನಟಿಸಿ, ಕನ್ನಡಿಗರಿಗೂ ಪರಿಚಯವಿರುವ ಮಲಯಾಳಿ ನಟಿ ಭಾಮಾ ಜೀವನದಲ್ಲಿ ಡಿವೋರ್ಸ್‌ ಬಿರುಗಾಳಿ ಬೀಸಿದೆ. ಅದೂ ಮದುವೆಯಾಗಿ ಕೇವಲ ನಾಲ್ಕೇ ವರ್ಷಕ್ಕೆ!

ಕೇರಳದ ನಟಿ ಭಾಮಾ ಮೂಲ ಹೆಸರು ರೇಖಿತಾ ಕುರುಪ್. ಚಿತ್ರರಂಗಕ್ಕೆ ಬಂದಮೇಲೆ ಭಾಮಾ ಎಂದು ಬದಲಿಸಿಕೊಂಡರು. 2007ರಲ್ಲಿ ನಿವೇದ್ಯಮ್‌ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಬಂದ ಭಾಮಾ, ಅದಾದ ಮೇಲೆ ಸಾಕಷ್ಟು ಸಿನಿಮಾ ಅವಕಾಶಗಳನ್ನು ಪಡೆದರು. 2010ರಲ್ಲಿ ನಟ ಯಶ್‌ ಜತೆಗೆ ಮೊದಲ ಸಲ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದರು. ಅದಾದ ಮೇಲೆ ಶೈಲೂ, ಒಂದು ಕ್ಷಣದ...