Bengaluru, ಮೇ 25 -- Bhagyalakshmi Serial: ಕುಸುಮಾಳನ್ನು ಕೆಲಸದಿಂದ ಹೊರ ಕಳಿಸುವ ದುರುದ್ದೇಶದಿಂದ ಹೋಟೆಲ್‌ ಚೆಫ್‌, ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟು ಆ ತಪ್ಪನ್ನು ಕುಸುಮಾ ಮೇಲೆ ಹೊರಿಸುತ್ತಾನೆ. ಗ್ರಾಹಕರು ದೂರು ನೀಡಿದ್ದರಿಂದ ಹೋಟೆಲ್‌ ಮಾಲೀಕ ಕೋಪಗೊಂಡು ಕುಸುಮಾ ಮೇಲೆ ರೇಗುತ್ತಾನೆ. ಆಕೆ ತಾನು ತಪ್ಪು ಮಾಡಿಲ್ಲವೆಂದರೂ ಆತ ನಂಬುವ ಸ್ಥಿತಿಯಲ್ಲಿ ಇಲ್ಲ.

ಕುಸುಮಾ, ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟಿರುವ ವಿಚಾರಕ್ಕಿಂತ ಆಕೆ ಗ್ರಾಹಕರೊಂದಿಗೆ ಮಾತನಾಡುವ ರೀತಿ, ತಮ್ಮ ಹೋಟೆಲ್‌ ಗುಟ್ಟನ್ನು ಬಿಟ್ಟುಕೊಟ್ಟ ಕಾರಣ ಮಾಲೀಕ ಕುಸುಮಾ ಮೇಲೆ ರೇಗಾಡುತ್ತಾನೆ. ನಂಬಿಕೆ ಇಲ್ಲದ ಕಡೆ ನಾನು ಕೆಲಸ ಮಾಡುವುದಿಲ್ಲ ಎಂದು ಕುಸುಮಾ ಅಲ್ಲಿಂದ ಹೊರಡುತ್ತಾಳೆ. ಆದರೆ ರಸ್ತೆಯಲ್ಲಿ ಮನೆ ಪರಿಸ್ಥಿತಿ ಬಗ್ಗೆ ಯೋಚಿಸುತ್ತಾಳೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಶ್ರೇಷ್ಠಾ ಹಣ ವಾಪಸ್‌ ಕೊಡಬೇಕು, ಮನೆ ಇಎಂಐ ಕಟ್ಟಬೇಕು ಏನು ಮಾಡುವುದು? ದೊರೆತಿರುವ ಕೆಲಸ ಬಿಟ್ಟರೆ ಚೆನ್ನಾಗಿರುವುದಿಲ್ಲ, ಬೇರೆ ಕಡೆ ಕೆಲಸ ಹುಡುಕುವುದೂ ಕಷ್ಟವಾಗಬಹು...