ಭಾರತ, ಏಪ್ರಿಲ್ 15 -- Muddu Sose Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಗೊಂಡಿದೆ. ಏಪ್ರಿಲ್‌ 14 ರಿಂದ ರಾತ್ರಿ 7.30ಕ್ಕೆ ಮುದ್ದುಸೊಸೆ ಹೆಸರಿನ ಹೊಸ ಧಾರಾವಾಹಿ ಆರಂಭವಾಗಿದೆ. ಮಂಡ್ಯ ಹಿನ್ನೆಲೆಯಲ್ಲಿ ಈ ಧಾರಾವಾಹಿ ಕಥೆ ಸಾಗುತ್ತದೆ. ಓದಿ ಡಾಕ್ಟರ್‌ ಆಗಬೇಕೆಂದು ಕನಸು ಕಂಡ ನಾಯಕಿ ವಿದ್ಯಾ, ಹೆಣ್ಣು ಮಕ್ಕಳು ಓದಿದರೆ ಅವರು ಕೆಟ್ಟ ದಾರಿ ಹಿಡಿಯುತ್ತಾರೆ ಎಂಬ ನಂಬಿರುವ ಶಿವರಾಮೇಗೌಡ, ಅಪ್ಪನ ಆದೇಶವನ್ನು ಚಾಚೂ ತಪ್ಪದೆ ಪಾಲಿಸುವ ಭದ್ರೇಗೌಡ, ಕೂಡು ಕುಟುಂಬದಲ್ಲಿದ್ದರೂ ಅಧಿಕಾರಕ್ಕಾಗಿ ಆಸೆ ಪಟ್ಟು ಭದ್ರೇಗೌಡ, ಶಿವರಾಮೇಗೌಡನ ವಿರುದ್ಧ ಕತ್ತಿ ಮಸೆಯುತ್ತಿರುವ ತಮ್ಮನ ಹೆಂಡತಿ, ಮಕ್ಕಳು ಹೀಗೆ ಕಥೆ ಆರಂಭವಾಗುತ್ತದೆ. ಮುದ್ದು ಸೊಸೆ ಧಾರಾವಾಹಿ ಮೊದಲ ಎಪಿಸೋಡ್‌ ಕಥೆ ಇಲ್ಲಿದೆ.

ನಟಿ ಮೇಘಾ ಶೆಟ್ಟಿ ದೇವಲಾಪುರದ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸುತ್ತಾರೆ. ದಾರಿಯಲ್ಲಿ ಭದ್ರೇಗೌಡ ಮೇಘಾಗೆ ಎದುರಾಗುತ್ತಾನೆ. ನಿಮ್ಮ ಮಂಡ್ಯ ಕಾಲೇಜೊಂದಕ್ಕೆ ಗೆಸ್ಟ್‌ ಆ...