Bangalore, ಮೇ 1 -- ಮುದ್ದು ಸೊಸೆ ಧಾರಾವಾಹಿ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 13ನೇ ಎಪಿಸೋಡ್ ಕಥೆ ಹೀಗಿದೆ. ಶಿವರಾಮೇಗೌಡ ತನ್ನ ಕುಟುಂಬದೊಂದಿಗೆ ರಾಜೇಗೌಡನ ಮನೆಗೆ ಹೆಣ್ಣು ನೋಡಲು ಹೋಗುತ್ತಾನೆ. ಸಾವಿತ್ರಿ ಹಾಗೂ ಮಗಳು ವಿನಂತಿ ಮಾತ್ರ ಮನೆಯಲ್ಲೇ ಉಳಿಯುತ್ತಾರೆ. ಅಪ್ಪನ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಭದ್ರ ಅಪ್ಪನ ತೀರ್ಮಾನವೇ ನನ್ನ ತೀರ್ಮಾನ ಎನ್ನುತ್ತಾನೆ. ತನಗಾಗಿ ಮಗ ಪ್ರೀತಿಯನ್ನೇ ತ್ಯಾಗ ಮಾಡುತ್ತಿದ್ದಾನೆ ಎಂಬ ವಿಚಾರ ಶಿವರಾಮೇಗೌಡನಿಗೆ ತಿಳಿಯುತ್ತದೆ. ಮತ್ತೊಂದೆಡೆ, ಮನೆ ಬಳಿ ಬಂದ ರತ್ನಳಿಗೆ ಸಾವಿತ್ರಿ ಬಾಯಿಗೆ ಬಂದಂತೆ ಬೈದು 3 ಲಕ್ಷ ರೂ ವಾಪಸ್ ನೀಡುವಂತೆ ಎಚ್ಚರಿಸುತ್ತಾಳೆ.
ಹೆಣ್ಣು ನೋಡಿ ಮನೆಗೆ ವಾಪಸ್ ಬಂದ ನಂತರ ಕ್ವಾಟ್ಲೆ ಹಾಗೂ ಭದ್ರ ಒಂದು ರೂಮ್‌ನಲ್ಲಿ ಕುಳಿತು ಅದೇ ವಿಚಾರವಾಗಿ ಮಾತನಾಡುತ್ತಾರೆ. ವಿದ್ಯಾಳನ್ನು ಅಷ್ಟು ಪ್ರೀತಿಸುವ ನೀನು ಅವಳನ್ನು ಮರೆತು ಅದು ಹೇಗೆ ಈ ಹೆಣ್ಣನ್ನು ಒಪ್ಪಿಕೊಂಡೆ ಎ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.