ಭಾರತ, ಮೇ 27 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 38ನೇ ಎಪಿಸೋಡ್‌ ಕಥೆ ಹೀಗಿದೆ. ಪರಿಚಯಸ್ಥ ವ್ಯಕ್ತಿ ಕೊಟ್ಟ ಅಡ್ರೆಸ್‌ ಜಾಡು ಹಿಡಿದ ಭದ್ರ ಹಾಗೂ ಕ್ವಾಟ್ಲೆ ಇಬ್ಬರೂ ಅಂಗಡಿ ಬಳಿ ಲೋಕೇಶನನ್ನು ಹಿಡಿಯುತ್ತಾರೆ. 6 ತಿಂಗಳ ಹಿಂದೆ ನಡೆದ ಘಟನೆಯನ್ನು ಭದ್ರ, ಅವನಿಗೆ ನೆನಪಿಸುತ್ತಾನೆ. ಆ ಮೊಬೈಲ್‌ ನನ್ನದು ಆದರೆ ಕರೆ ಮಾಡಿದ್ದು ನಾನಲ್ಲ ಎಂದು ಆತ ಹೇಳುತ್ತಾನೆ. ಭದ್ರನಿಗೆ ವಿನಂತಿ ಮೇಲೆ ಅನುಮಾನ ಬಂದು ಲೋಕೇಶನನ್ನು ಮನೆ ಬಳಿ ಕರೆತರುತ್ತಾನೆ. ಅವನನ್ನು ನೋಡಿ ವಿನಂತಿ ಗಾಬರಿಯಾಗುತ್ತಾಳೆ. ನಿನ್ನ ಬಳಿ ಮೊಬೈಲ್‌ ಕೇಳಿದ ಹುಡುಗಿ ಇವಳೇನಾ ಹೇಳು ಎಂದು ಭದ್ರ ಕೇಳುತ್ತಾನೆ.

ಸಾವಿತ್ರಿ ಬಳಿ ವಿನಂತಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಅಮ್ಮ ಮಗಳ ವರ್ತನೆ ನೋಡಿ ಈಶ್ವರಿಗೆ ಅನುಮಾನ ಉಂಟಾಗುತ್ತದೆ. ಆ ದಿನ ನನ್ನಿಂದ ಪೋನ್‌ ಪಡೆದು ಪೊಲೀಸರಿಗೆ ಫೋನ್‌ ಮಾಡಿದ್ದು ವಿನಂತಿ ಎಂದು ಲೋಕೇಶನಿಗೆ ನೆನಪಿದ್ದರೂ ಆ ಹುಡುಗಿ ಇವಳಲ್ಲ ಎಂದು ಭದ್ರನ ಬಳಿ ಸ...