ಭಾರತ, ಮೇ 21 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 33ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾ ಮನೆ ಬಿಟ್ಟು ಹೋಗಲು ಪ್ರಯತ್ನಿಸಿದ್ದಕ್ಕೆ ಅವಳ ಕಾಲಿಗೆ, ಅಕ್ಕನಿಗೆ ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಚೆಲುವ ಬರೆ ಎಳೆಯುತ್ತಾನೆ. ಮಕ್ಕಳ ಅವಸ್ಥೆ ನೋಡಿ ರತ್ನ ಕಣ್ಣೀರಿಡುತ್ತಾಳೆ. ಹೆಣ್ಣು ಮಕ್ಕಳು ಮದುವೆ ಆಗಿ ಮನೆಯಿಂದ ಹೊರ ಹೋದರೆ ಮಾತ್ರ ಸಮಾಜ ಗೌರವ ಕೊಡುತ್ತದೆ, ಇನ್ಮುಂದೆ ಹೀಗೆಲ್ಲಾ ಮಾಡಬೇಡಿ ಎಂದು ಬುದ್ಧಿ ಹೇಳುತ್ತಾಳೆ. ಶಾಲೆಗೆ ಹೋಗದಿದ್ದರೂ ವಿದ್ಯಾ ಓದುತ್ತಾ ಕೂರುತ್ತಾಳೆ. ಹೀಗೇ 6 ತಿಂಗಳು ಕಳೆಯುತ್ತದೆ.

ಮನೆ ಕಡೆ ಬರಬೇಡ ಎಂದು ಶಿವರಾಮೇಗೌಡನ ತಾಯಿ ಹೇಳಿದ್ದರೂ ಚೆಲುವ ಮಾತ್ರ ಆಗ್ಗಾಗ್ಗೆ ಗೌಡರ ಮನೆಗೆ ಹೋಗಿ ಬರುತ್ತಾನೆ. ಭದ್ರ ತೋಟದಲ್ಲಿ ಒಬ್ಬನೇ ಇರುವಾಗ ಅಲ್ಲಿಗೆ ಬರುವ ಚೆಲುವ ಮೊದಲು ಗೌಡರ ಯೋಗಕ್ಷೇಮ ವಿಚಾರಿಸುತ್ತಾನೆ. ಚೆಲುವನನ್ನು ನೋಡಿ ಭದ್ರ ಮಾವ ಎಂದು ಮಾತನಾಡಿಸುತ್ತಾನೆ. ಸದ್ಯಕ್ಕೆ ನೀವೂ ಕೂಡಾ ನಿಮ್ಮ ಅಜ್ಜಿಯಂತ...