Bengaluru, ಏಪ್ರಿಲ್ 29 -- ಮುದ್ದು ಸೊಸೆ ಧಾರಾವಾಹಿ: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 11ನೇ ಎಪಿಸೋಡ್‌ ಕಥೆ ಹೀಗಿದೆ. ಹೆಂಡತಿ ಬಳಿ ಪಡೆದ ಓಲೆಯನ್ನು ಅಡವಿಟ್ಟು ಅದರಿಂದ ಬಂದ ಹಣವನ್ನು ಕುಡಿತಕ್ಕೆ ಬಳಸಿಕೊಳ್ಳಬೇಕು ಎಂದುಕೊಂಡಿದ್ದ ಚೆಲುವನ ಪ್ಲ್ಯಾನ್ ಉಲ್ಟಾ ಆಗುತ್ತದೆ. ಸಾಲ ಕೊಟ್ಟವನು ವಿದ್ಯಾಳ ಕೈ ಹಿಡಿದು ಎಳೆದೊಯ್ಯುವಾಗ ಅಲ್ಲಿಗೆ ಭದ್ರ ಬಂದು ರೌಡಿಗಳ ಜೊತೆ ಹೊಡೆದಾಡಿ ವಿದ್ಯಾಳನ್ನು ಕಾಪಾಡುತ್ತಾನೆ. ಚೆಲುವ ಸಾಲಗಾರನಿಗೆ ಕೊಡಬೇಕಾದ ದುಡ್ಡನ್ನು ತಾನು ಕೊಡುವುದಾಗಿ ಹೇಳುತ್ತಾನೆ.

ಇತ್ತ ಮನೆಯಲ್ಲಿ ಚಿಕ್ಕೇಗೌಡ ಹಾಗೂ ಶಿವರಾಮೇಗೌಡ ವಿದ್ಯಾ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ವಿದ್ಯಾ ಬಹಳ ಒಳ್ಳೆ ಹೆಣ್ಣು ಮಗಳು, ಅವಳ ವಿಚಾರದಲ್ಲಿ ಯಾರೂ ಬೆರಳು ತೋರಿಸಲು ಸಾಧ್ಯವಿಲ್ಲ, ಆದರೆ ಅವರಪ್ಪ ಮಾತ್ರ ಕುಡುಕ ಎಂದು ಚಿಕ್ಕೇಗೌಡ ಹೇಳುತ್ತಾನೆ. ಎಲ್ಲವನ್ನೂ ಆರಂಭದಲ್ಲೇ ಚಿವುಟಿ ಹಾಕಬೇಕು, ಬೆಳೆಯಲು ಬಿಟ್ಟರೆ ನಮಗೆ ಸಮಸ್ಯೆ ಆಗುತ್ತದೆ. ಇನ...