Bengaluru, ಏಪ್ರಿಲ್ 26 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 10ನೇ ಎಪಿಸೋಡ್‌ ಕಥೆ ಹೀಗಿದೆ. ಬೇರೆ ಕಡೆ ಹೆಣ್ಣು ನೋಡಲು ಇಷ್ಟವಿಲ್ಲದೆ ಭದ್ರೇಗೌಡ ತನ್ನ ಚಿಕ್ಕಮ್ಮ ಈಶ್ವರಿ ಮುಖಾಂತರ ತನ್ನ ಪ್ರೀತಿ ವಿಚಾರವನ್ನು ತಂದೆ ಶಿವರಾಮೇಗೌಡನಿಗೆ ತಿಳಿಸುತ್ತಾನೆ. ನನ್ನ ಮಗ ನೋಡಿದ ಹುಡುಗಿಯೇ ಈ ಮನೆ ಸೊಸೆ ಎಂದು ಶಿವರಾಮ ಹೇಳುತ್ತಾನೆ. ಆದರೆ ಅದು ಆ ಚೆಲುವನ ಮಗಳು ಎಂದು ತಿಳಿದ ನಂತರ ಶಾಕ್‌ ಆಗುತ್ತಾನೆ.

ಭದ್ರನ ಪ್ರೀತಿ ವಿಚಾರ ಕೇಳಿ ಸಾವಿತ್ರಿ ಸಿಟ್ಟಾಗುತ್ತಾಳೆ. ಈ ಸಮಯವನ್ನು ಅವಳು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾಳೆ. ನೋಡಣ್ಣಾ, ನಿನ್ನ ಮಗ ಒಳ್ಳೆ ಮರ್ಯಾದಸ್ತ ಮನೆ ಹೆಣ್ಣು ಮಗಳನ್ನೇ ಪ್ರೀತಿಸುತ್ತಿದ್ದಾನೆ. ಚಿನ್ನದಂಥ ನನ್ನ ಮಗಳು ವಿನಂತಿಯನ್ನು ಸೊಸೆ ಮಾಡಿಕೋ ಎಂದರೆ ಜಾತಕ ಕೂಡಿ ಬರುವುದಿಲ್ಲ ಎಂದು ಹೇಳಿದೆ, ಆದರೆ ಈಗ ನಮ್ಮ ಅಂತಸ್ತಿಗೂ , ನಿನ್ನ ಮಗ ಪ್ರೀತಿ ಮಾಡಿರುವ ಹುಡುಗಿ ಮನೆ ಅಂತಸ್ತಿಗೂ ಸರಿ ಹೊಂದುವುದಾ? ಸಾವಿತ್ರಿ ಇ...