ಭಾರತ, ಏಪ್ರಿಲ್ 19 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 5ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾ ಹಾಗೂ ಸರೂ ಮಾಡಿದ ತಮಾಷೆಯಿಂದ ಭದ್ರೇಗೌಡ ಹಾಗೂ ಕ್ವಾಟ್ಲೆ ಕೆಸರಿಗೆ ಬೀಳುತ್ತಾರೆ. ಹರಿವ ನೀರಿನಲ್ಲಿ ಸ್ನಾನ ಮಾಡಿ ಮನೆಗೆ ಹೋಗುತ್ತಾರೆ. ತಣ್ಣೀರಿನಲ್ಲಿ ಸ್ನಾನ ಮಾಡಿದ್ದಕ್ಕೆ ಭದ್ರನಿಗೆ ಬಹಳ ಶೀತ ಕಾಡುತ್ತದೆ. ಊಟ ಕೊಡಲು ಬಂದ ವಿದ್ಯಾಗೆ ವಿಚಾರ ಗೊತ್ತಾಗಿ ವಿದ್ಯಾ ನನ್ನಿಂದಲೇ ಹೀಗೆಲಾ ಆಗಿದ್ದು ಎಂದು ಪಶ್ಚಾತಾಪ ವ್ಯಕ್ತಪಡಿಸುತ್ತಾಳೆ. ತನ್ನಿಂದ ಆದ ತಪ್ಪನ್ನು ಸರಿಪಡಿಸಲು ನಾಟಿ ಸೊಪ್ಪೊಂದನ್ನು ತಂದು ಕ್ವಾಟ್ಲೆ ಬಳಿ ಕೊಡುತ್ತಾಳೆ.

ವಿದ್ಯಾ ಕೊಟ್ಟ ನಾಟಿ ಸೊಪ್ಪನ್ನು ಕ್ವಾಟ್ಲೆ ಬಿಸಿ ನೀರಿಗೆ ಹಾಕಿ ಭದ್ರನ ಮುಂದೆ ತಂದಿಡುತ್ತಾನೆ. ಬೇಗ ಈ ಆವಿ ತೆಗೆದುಕೋ, ಶೀತ ವಾಸಿಯಾಗುತ್ತದೆ ಎನ್ನುತ್ತಾನೆ. ಇದಕ್ಕೆಲ್ಲಾ ಶೀತ, ನೆಗಡಿ ವಾಸಿಯಾಗುವುದಾ? ಸುಮ್ಮನಿರು ಯಾರೋ ಕೊಟ್ಟರು ಅಂತ ಇದನ್ನು ನನ್ನ ಬಳಿ ತೆಗೆದುಕೊಂಡು ಬಂದಿದ್ದೀಯ ಎನ್ನುತ್ತಾನ...