ಭಾರತ, ಏಪ್ರಿಲ್ 22 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 6ನೇ ಎಪಿಸೋಡ್‌ ಕಥೆ ಹೀಗಿದೆ. ಶೀತದಿಂದ ಬಳಲುತ್ತಿದ್ದ ಭದ್ರೇಗೌಡನಿಗೆ ವಿದ್ಯಾ ನಾಟಿ ಸೊಪ್ಪು ತಂದುಕೊಡುತ್ತಾಳೆ. ಅದರಿಂದ ಭದ್ರನಿಗೆ ನೆಗಡಿ ವಾಸಿಯಾಗುತ್ತದೆ. ತಾನು ಮಾಡಿದ ತಪ್ಪನ್ನು ಕ್ಷಮಿಸಿಬಿಡಿ ಎಂದು ವಿದ್ಯಾ ಕ್ಷಮೆ ಕೇಳುತ್ತಾಳೆ. ಪ್ರೀತಿಯ ಹುಡುಗಿ ಹೆಸರು ವಿದ್ಯಾ ಎಂದು ತಿಳಿದು ಭದ್ರ ಖುಷಿಯಾಗುತ್ತಾನೆ. ಮಗಳು ಮಾಡಿದ ಅವಾಂತರ ತಿಳಿದು ರತ್ನ ಇಬ್ಬರೂ ಹೆಣ್ಣು ಮಕ್ಕಳಿಗೂ ಹೊಡೆಯುತ್ತಾಳೆ.

ತಾನು ಪ್ರೀತಿಯಿಂದ ಸಾಕಿದ ಮೇಕೆ ಗೋಪಾಲನನ್ನು ಗೌಡರ ಮನೆಯವರು ಪೂಜೆಯಲ್ಲಿ ಬಲಿ ಕೊಡುತ್ತಿದ್ದಾರೆ ಎಂದು ತಿಳಿದ ವಿದ್ಯಾ ಬೇಸರಗೊಳ್ಳುತ್ತಾಳೆ. ತನ್ನ ನೋವನ್ನು ತಂಗಿ ಸರೂ ಬಳಿ ಹೇಳಿಕೊಳ್ಳುತ್ತಾಳೆ. ಇತ್ತ ಶಿವರಾಮೇಗೌಡನ ಮನೆಯಲ್ಲಿ ಪೂಜೆ ಆರಂಭವಾಗುತ್ತದೆ. ಇಬ್ಬರು ವ್ಯಕ್ತಿಗಳು ಮೇಕೆಯನ್ನು ಹಿಡಿದು ತರುತ್ತಾರೆ. ಶಿವರಾಮೇಗೌಡ ಅದಕ್ಕೆ ಪೂಜೆ ಮಾಡಿ, ಇದನ್ನೆಲ್ಲಾ ನನ್ನ ಮಗನಿಗಾಗಿ ಮ...