Bangalore, ಮೇ 24 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 35ನೇ ಎಪಿಸೋಡ್‌ ಕಥೆ ಹೀಗಿದೆ. ತಂದೆ ಶಿವರಾಮೇಗೌಡನಿಗೆ ಭದ್ರ ಹಾಲಿನ ಅಭಿಷೇಕ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾನೆ. 6 ತಿಂಗಳ ನಂತರ ಮತ್ತೆ ಶಿವರಾಮೇಗೌಡ ಅದೇ ಗತ್ತಿನಿಂದ ಸಿಂಹಾಸನದ ಮೇಲೆ ಬಂದು ಕೂರುತ್ತಾನೆ. ಮೊದಲು ಭದ್ರನಿಗೆ ಗೊತ್ತು ಪಡಿಸಿದ ಹುಡುಗಿ ಜೊತೆಯೇ ಅವನ ಮದುವೆ ಎಂದು ಹೇಳುತ್ತಾನೆ. ಅದೇ ದಿನ ವಿದ್ಯಾಗೆ 18 ವರ್ಷ ತುಂಬಿರುವ ವಿಚಾರ ಗೊತ್ತಾಗುತ್ತದೆ. ಎಲ್ಲರೂ ಮತ್ತೆ ದೇವಲಾಪುರಕ್ಕೆ ಹೊರಡುತ್ತಾರೆ. ವಿದ್ಯಾ ಮನೆಗೆ ಭದ್ರ ವಿದ್ಯುತ್‌ ಅಲಂಕಾರ ಮಾಡಿಸಿ, ಮನೆ ಬಳಿ ಪಟಾಕಿ ಹೊಡೆಸುತ್ತಾನೆ. ವಿದ್ಯಾಗೆ ಬರ್ತ್‌ಡೇ ಶುಭ ಕೋರಿ ಸೀರೆ, ಹೂವು, ಬಳೆ ಕೊಟ್ಟು ಅದನ್ನು ಧರಿಸಿ ಬರುವಂತೆ ಹೇಳುತ್ತಾನೆ.

ಈ ಬಾರಿಯೂ ಮದುವೆ ನಿಲ್ಲುತ್ತದೆ. ಕಾಲ್ಗುಣ ಸರಿ ಇಲ್ಲ ಎಂದು ಗೌಡರ ಮನೆಯವರು ಖಂಡಿತ ಸಂಬಂಧ ಬೇಡವೆಂದು ಹೇಳುತ್ತಾರೆ ಎಂದುಕೊಂಡಿದ್ದ ವಿದ್ಯಾಗೆ ಮತ್ತೆ ಮದುವೆ ಕೆಲಸ...