Bengaluru, ಏಪ್ರಿಲ್ 16 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 2ನೇ ಎಪಿಸೋಡ್‌ ಕಥೆ ಹೀಗಿದೆ. ಹುಲಿಕೆರೆ ಜಮೀನ್ದಾರ ಶಿವರಾಮೇಗೌಡನಿಗೆ ತನ್ನ ಮಗ ಭದ್ರೇಗೌಡನಿಗೆ ಒಂದೊಳ್ಳೆ ಹೆಣ್ಣು ನೋಡಿ ಆದಷ್ಟು ಬೇಗ ಮದುವೆ ಮಾಡಬೇಕೆಂಬ ಆಸೆ. ಆದರೆ ಹಿಂದೊಮ್ಮೆ ನಡೆದ ಯಾವುದೋ ಘಟನೆಯಿಂದ ನೊಂದಿದ್ದ ಭದ್ರೇಗೌಡ ಮದುವೆಗೆ ನಿರಾಕರಿಸುತ್ತಾನೆ. ನನಗೆ ಮದುವೆ ಆಗುವ ಅರ್ಹತೆಯೇ ಇಲ್ಲ ಎಂದುಕೊಳ್ಳುತ್ತಾನೆ. ಮಗನ ವರ್ತನೆಯಿಂದ ಶಿವರಾಮೇಗೌಡನಿಗೆ ಬೇಸರ ಉಂಟಾಗುತ್ತದೆ.

ದೇವರ ಪೂಜೆ ಮಾಡುವಾಗ ಕ್ವಾಟ್ಲೆ ಮೈ ಮೇಲೆ ದೇವಿ ಬರುತ್ತಾಳೆ. ನನ್ನ ಮೇಲೆ ಏಕೆ ಮುನಿಸಿಕೊಂಡಿದ್ದೀಯ ತಾಯಿ? ನಮ್ಮ ಮನೆಯಲ್ಲಿ ಏಕೆ ಶುಭಕಾರ್ಯಗಳು ನಡೆಯುತ್ತಿಲ್ಲ ಎಂದು ಶಿವರಾಮೇಗೌಡ ಕೇಳುತ್ತಾನೆ. ಮನೆ ದೇವರ ಪೂಜೆ ಮಾಡುವುದನ್ನು ಮರೆತಿದ್ದೀಯ ಎಂದು ದೇವಿ ಹೇಳುತ್ತಾಳೆ. ಆಗ ಶಿವರಾಮೇಗೌಡ ದೇವಿಗೆ ಕ್ಷಮೆ ಕೇಳಿ ಕುಟುಂಬ ಸಹಿತ ತನ್ನ ಸ್ವಂತ ಊರಿಗೆ ಹೊರಡಲು ಸಿದ್ಧನಾಗುತ್ತಾನೆ. ಮಗನನ್ನು ಕರೆ...