Bengaluru, ಮೇ 9 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 21ನೇ ಎಪಿಸೋಡ್ ಕಥೆ ಹೀಗಿದೆ. ವಿದ್ಯಾ ಮದುವೆ ಭದ್ರೇಗೌಡನ ಜೊತೆ ಫಿಕ್ಸ್ ಆಗಿದೆ. ವಿದ್ಯಾ ಕಾಲೇಜಿಗೆ ಹೋಗಬಾರದು ಎಂಬ ಕಾರಣಕ್ಕೆ ಚೆಲುವ, ಅವಳ ಯೂನಿಫಾರ್ಮ್ ಸುಟ್ಟಿದ್ದಾನೆ. ಓಂದೆಡೆ ಓದುವ ಕನಸು ಕಾಣುತ್ತಾ ವಿದ್ಯಾ ಅಳುತ್ತಿದ್ದರೆ, ಇಷ್ಟಪಟ್ಟ ಹುಡುಗಿಯ ಕೈ ಹಿಡಿಯುತ್ತಿರುವುದಕ್ಕೆ ಭದ್ರ ಖುಷಿಯಾಗಿದ್ದಾನೆ. ಶಿವರಾಮೇಗೌಡ ತನ್ನ ಸೊಸೆಯಾಗಿ ದುಬಾರಿ ಬೆಲೆಯ ಸೀರೆ, ಒಡವೆಯನ್ನು ಖರೀದಿಸಿದ್ದಾನೆ. ಹೇಗಾದರೂ ಮಾಡಿ ಮದುವೆ ನಿಲ್ಲಿಸುವುದಕ್ಕೆ ವಿದ್ಯಾ ಶತಪ್ರಯತ್ನ ಮಾಡುತ್ತಿದ್ದಾಳೆ. ತನ್ನ ಆಸೆಯನ್ನು ಈಶ್ವರಿ ಬಳಿಯೂ ಹೇಳಿಕೊಂಡಿದ್ದಾಳೆ.
ಶಿವರಾಮೇಗೌಡ ಹಾಗೂ ಭದ್ರ ಮಾತನಾಡುವಾಗ ಚಿನ್ನದ ಅಂಗಡಿಯವರು ಮನೆಗೆ ಬರುತ್ತಾರೆ. ಮದುವೆ ಹೆಣ್ಣಿಗಾಗಿ ಮಾಂಗಲ್ಯ ಹಾಗೂ ಮಾಂಗಲ್ಯ ಸರ ತಂದಿದ್ದಾರೆ ಎಂದು ಮೋಹನ ಹೇಳುತ್ತಾಳೆ. ಹಾಗಾದರೆ ನೀನು ಅದನ್ನು ಒಮ್ಮೆ ನೋಡು ಎಂದು ಶಿವರಾಮೇಗೌಡ ಹೇಳುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.