ಭಾರತ, ಮೇ 17 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 29ನೇ ಎಪಿಸೋಡ್‌ ಕಥೆ ಹೀಗಿದೆ. ಡ್ಯೂಟಿ ಮೇಲಿದ್ದ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ್ದಕ್ಕೆ ಶಿವರಾಮೇಗೌಡನಿಗೆ ನ್ಯಾಯಾಲಯ 6 ತಿಂಗಳ ಕಠಿಣ ಶಿಕ್ಷೆ ವಿಧಿಸುತ್ತದೆ. ತಂದೆಯನ್ನು ಬಿಡಿಸಲು ವಿಫಲನಾಗಿದ್ದಕ್ಕೆ ಭದ್ರೇಗೌಡ ಬೇಸರಗೊಳ್ಳುತ್ತಾನೆ. ಶಿವರಾಮೇಗೌಡ ಜೈಲಿನಲ್ಲಿ ಕೂಡಾ ನೆಮ್ಮದಿಯಾಗಿರಬಾರದು ಎಂದು ಈಶ್ವರಿ ತನ್ನ ಮಗ ಸುಭಾಷನಿಗೆ ಹೇಳಿ ಜೈಲರ್‌ಗೆ ಲಂಚ ಕೊಡಿಸುತ್ತಾಳೆ. ಆತ ಜೈಲಿನಲ್ಲಿ ಶಿವರಾಮೇಗೌಡನಿಗೆ ಅವಮಾನ ಮಾಡುತ್ತಾನೆ.

ಜೈಲಿನಲ್ಲಿ ಶಿವರಾಮೇಗೌಡ ಮಗ ಭದ್ರನ ಬಗ್ಗೆಯೇ ಯೋಚಿಸುತ್ತಾನೆ. ನಾನು ಇಲ್ಲಿ ಶಿಕ್ಷೆ ಅನುಭವಿಸುತ್ತಿರುವಷ್ಟು ಹೆಚ್ಚಾಗಿ ನನ್ನ ಮಗ ನೋವು ಅನುಭವಿಸುತ್ತಿದ್ದಾನೆ. ನನಗೆ ಸ್ವಲ್ಪ ನೋವಾದರೂ ಅವನು ಸಹಿಸುವುದಿಲ್ಲ, ಅಂತದರಲ್ಲಿ ನನಗೆ ಇಂಥ ಗತಿ ತಂದವರನ್ನು ಅವನು ಸುಮ್ಮನೆ ಬಿಡುವುದಿಲ್ಲ. ಯಾಕಾದರೂ ನಾವು ಈ ಕೆಲಸ ಮಾಡಿದೆವೋ ಎಂದು ಅವರು ಬೆಚ್ಚಿಬೀಳುವ...