ಭಾರತ, ಏಪ್ರಿಲ್ 17 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 3ನೇ ಎಪಿಸೋಡ್‌ ಕಥೆ ಹೀಗಿದೆ. ಶಿವರಾಮೇಗೌಡ, ದೇವಿಯ ಆಜ್ಞೆಯಂತೆ ತನ್ನ ಸ್ವಂತ ಊರಿಗೆ ಕುಟುಂಬದೊಂದಿಗೆ ಹೊರಡುತ್ತಾನೆ. ಅವನ ಹೆಂಡತಿ ಮೋನಾ ಮೈ ತುಂಬಾ ಒಡವೆ ಹಾಕಿರುವುದನ್ನು ನೋಡಿದ ವಾರಗಿತ್ತಿ ಈಶ್ವರಿ ಹಾಗೂ ಮಗಳು ಚಿತ್ರಾ ಅದನ್ನು ಪಡೆಯಲು ಪ್ಲ್ಯಾನ್‌ ಮಾಡುತ್ತಾರೆ. ಮೋನಾಳಿಂದ ನೆಕ್‌ಲೇಸ್‌, ಬಳೆ ಎರಡನ್ನೂ ಪಡೆಯುತ್ತಾರೆ. ಊರಿನ ದಾರಿಯಲ್ಲಿ ವಿದ್ಯಾಳನ್ನು ನೋಡುವ ಭದ್ರೇಗೌಡ ಅವಳ ರೂಪ, ಮಾತಿಗೆ ಸೋತುಹೋಗುತ್ತಾನೆ.

ಬಹಳ ದಿನಗಳ ನಂತರ ಊರಿಗೆ ಬರುವ ಶಿವರಾಮೇಗೌಡನನ್ನು ಚಿಕ್ಕಪ್ಪ ಬರಮಾಡಿಕೊಳ್ಳುತ್ತಾರೆ. ತಾವು ಹುಟ್ಟಿ ಬೆಳೆದ ಮನೆಗೆ ಬಂದು ಶಿವರಾಮೇಗೌಡ ಖುಷಿಯಾಗುತ್ತಾನೆ. ವಿಶ್ರಾಂತಿ ಪಡೆದು ಎಲ್ಲರೂ ಮಾತಿಗೆ ಕೂರುತ್ತಾರೆ. ಮಗನಿಗೆ ಮದುವೆ ಮಾಡುವುದಿಲ್ಲವೇ ಎಂದು ಶಿವರಾಮೇಗೌಡನ ಚಿಕ್ಕಪ್ಪ ಕೇಳುತ್ತಾರೆ. ಮಾಡಬೇಕು ಚಿಕ್ಕಪ್ಪ ಅದಕ್ಕೆ ದೇವಿ ಹೇಳಿದಂತೆ ಇಲ್ಲಿಗೆ ಬಂದು ಪೂಜೆ ...