ಭಾರತ, ಮೇ 23 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 34ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾಗೆ 18 ವರ್ಷ ತುಂಬಿದ ದಿನವೇ ಶಿವರಾಮೇಗೌಡ ಜೈಲಿನಿಂದ ಬಿಡುಗಡೆ ಆಗುತ್ತಾನೆ. ಅವಮಾನ ತಾಳಲಾರದೆ ಶಿವರಾಮೇಗೌಡ ಎದೆ ಹಿಡಿದು ಸತ್ತಂತೆ ಈಶ್ವರಿ ಕನಸು ಕಾಣುತ್ತಾಳೆ. ನಿನ್ನನ್ನು ಜೈಲಿನಿಂದ ಬಿಡಿಸಲು ಸಾಧ್ಯವಾಗದಿದ್ದಕ್ಕೆ ಕ್ಷಮಿಸು ಎಂದು ತಂದೆ ಬಳಿ ಭದ್ರ ಕ್ಷಮೆ ಕೇಳುತ್ತಾನೆ. ಜೀವನದಲ್ಲಿ ಇಂಥ ಘಟನೆಗಳು ನಡೆದರೆ ನಾವು ಗಟ್ಟಿಯಾಗುತ್ತೇವೆ, ತಪ್ಪು ಮಾಡಿದ್ದೇನೆ, ಅದಕ್ಕೆ ಶಿಕ್ಷೆ ಅನುಭವಿಸಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿ ಇಂಥ ಏರಿಳಿತಗಳು ಇದ್ದೇ ಇರುತ್ತದೆ ಎಂದು ಶಿವರಾಮೇಗೌಡ ಹೇಳುತ್ತಾನೆ.

ಆಗಿರುವ ಅವಮಾನಕ್ಕೆ ನೀನು ಸಾಯುತ್ತೀಯ ಎಂದುಕೊಂಡಿದ್ದೆ, ಆದರೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಶಿಕ್ಷೆ ಅನುಭವಿಸಿದರೂ ನೀನು ಏನೂ ಆಗಿಲ್ಲ ಎಂಬಂತೆ ಇದ್ದೀಯ ಎಂದು ಈಶ್ವರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಮನೆ ಒಳಗೆ ಹೋಗುತ...