Bangalore, ಮೇ 26 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 37ನೇ ಎಪಿಸೋಡ್ ಕಥೆ ಹೀಗಿದೆ. ಭದ್ರ ಹಾಗೂ ವಿದ್ಯಾ ಮನೆಯಲ್ಲಿ ಮತ್ತೆ ಮದುವೆ ಶಾಸ್ತ್ರಗಳು ಆರಂಭವಾಗಿದೆ. ತಾನು ಮುಚ್ಚಿಟ್ಟಿದ್ದ ಸತ್ಯವನ್ನು ವಿದ್ಯಾ ಭದ್ರನ ಬಳಿ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಅದು ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ಹೇಳಿ ಮದುವೆ ನಿಲ್ಲಿಸಿದ್ದು ವಿದ್ಯಾ ಎಂದು ಚೆಲುವನಿಗೆ ಗೊತ್ತಾಗಿ ಭದ್ರ ಕೋಪದಿಂದ ಅವಳ ಕತ್ತನ್ನು ಮಚ್ಚಿನಿಂದ ಕತ್ತರಿಸುವಂತೆ ಚೆಲುವ ಕನಸು ಕಾಣುತ್ತಾನೆ.
ನಿಜವಾಗಿಯೂ ಭದ್ರ ನನ್ನ ಮಗಳನ್ನು ಕೊಲ್ಲುತ್ತಿದ್ದಾನೆ ಎಂದು ತಿಳಿದು ಚೆಲುವ ಗಾಬರಿಯಿಂದ ಮಗಳೇ ವಿದ್ಯಾ ಎಂದು ಅರಚುತ್ತಾನೆ. ಅವನನ್ನು ನೋಡಿ ಎಲ್ಲರೂ ಗಾಬರಿಯಿಂದ ಓಡಿ ಬರುತ್ತಾರೆ. ರತ್ನ ತನ್ನ ಗಂಡನನ್ನು ಎಚ್ಚರಿಸುತ್ತಾಳೆ. ತಾನು ಕಾಣುತ್ತಿರುವುದು ಕನಸು ಎಂದು ತಿಳಿದು ಚೆಲುವ ನಿಟ್ಟುಸಿರು ಬಿಡುತ್ತಾನೆ. ಎದುರು ನಿಂತಿದ್ದ ಮಗಳನ್ನು ನೋಡಿ, ಮಗಳೇ ನಿನಗೇನೂ ತೊಂದರೆ ಆಗಿಲ್ಲ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.