Bengaluru, ಮೇ 12 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 24ನೇ ಎಪಿಸೋಡ್‌ ಕಥೆ ಹೀಗಿದೆ. ಮಗಳನ್ನು ಮದುವೆಗೆ ಒಪ್ಪಿಸಲು ಚೆಲುವ, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ನಾಟಕ ಮಾಡುತ್ತಾನೆ. ಅದಕ್ಕೆ ಹೆದರಿ ವಿದ್ಯಾ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಅದೇ ಸಮಯಕ್ಕೆ ಭದ್ರ ಕರೆ ಮಾಡಿ, ನನ್ನನ್ನು ಮದುವೆ ಆಗಲು ನಿಮಗೆ ಒಪ್ಪಿಗೆ ಇದೆಯಾ ಎಂದು ಕೇಳುತ್ತಾನೆ. ಇಷ್ಟವಿಲ್ಲದಿದ್ದರೂ ವಿದ್ಯಾ ನನಗೆ ಒಪ್ಪಿಗೆ ಎಂದು ಹೇಳುತ್ತಾಳೆ. ಇಷ್ಟು ಹೊತ್ತು ಅಪ್ಪ ಮಾಡಿದ್ದು ನಾಟಕ ಎಂದು ಗೊತ್ತಾದ ನಂತರ ವಿದ್ಯಾ ಒಂದು ನಿರ್ಧಾರಕ್ಕೆ ಬರುತ್ತಾಳೆ. ಪೊಲೀಸರಿಗೆ ಕರೆ ಮಾಡಿ ತಾನು ಅಪ್ತಾಪ್ತೆ, ಮನೆಯಲ್ಲಿ ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ, ದಯವಿಟ್ಟು ಈ ಮದುವೆ ನಿಲ್ಲಿಸಿ ಎಂದು ಮನವಿ ಮಾಡುತ್ತಾಳೆ.

ಭದ್ರೇಗೌಡ ಹಾಗೂ ವಿದ್ಯಾ ಮದುವೆ ತಯಾರಿ ಶುರುವಾಗಿದೆ. ಚೆಲುವನ ಮನೆಯಲ್ಲಿ ಚಪ್ಪರ ಹಾಕಿ, ಹೂವಿನ ಅಲಂಕಾರ ಮಾಡಲಾಗಿದೆ. ಚೆಲುವ ಅಂತೂ ಮಗಳ ಮೂಲಕ ನಮ್ಮ ಮನ...