ಭಾರತ, ಮೇ 10 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 22ನೇ ಎಪಿಸೋಡ್‌ ಕಥೆ ಹೀಗಿದೆ. ಮನೆ ಸೊಸೆಗಾಗಿ ಶಿವರಾಮೇಗೌಡ ಮಾಂಗಲ್ಯ ಹಾಗೂ ಮಾಂಗಲ್ಯ ಸರವನ್ನು ತರಿಸುತ್ತಾನೆ. ಅದನ್ನು ನೋಡಿ ಮೋಹನ ಖುಷಿಯಾಗಿ ಬೀಗತಿ ರತ್ನಳಿಗೆ ಕರೆ ಮಾಡಿ ಹೇಳುತ್ತಾಳೆ. ನಿಮ್ಮ ಮನೆ ಸೇರಲು ನಮ್ಮ ಮಗಳು ಬಹಳ ಪುಣ್ಯ ಮಾಡಿದ್ದಾಳೆ ಎಂದು ರತ್ನ ಖುಷಿಯಾಗುತ್ತಾಳೆ. ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕು ಎಂದು ವಿದ್ಯಾ ತನ್ನ ಮನಸ್ಸಿನ ಆಸೆಗಳನ್ನು ಪತ್ರದಲ್ಲಿ ಬರೆದು ಅದನ್ನು ಭದ್ರನಿಗೆ ತಲುಪಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಅದು ಈಶ್ವರಿ ಕೈ ಸೇರುತ್ತದೆ.

ವಿದ್ಯಾ, ಮದುವೆ ವಿಚಾರವನ್ನೇ ಯೋಚಿಸುತ್ತಾ ಕೂರುತ್ತಾಳೆ. ಅಷ್ಟರಲ್ಲಿ ರತ್ನ ಬಂದು ಭದ್ರ ನಿನಗಾಗಿ ಮನೆಗೆ ಬ್ಯೂಟಿಷಿಯನ್‌ ಕಳಿಸಿದ್ದಾರೆ ಬಾ ಎಂದು ಕರೆಯುತ್ತಾಳೆ. ನನಗೆ ಅದೆಲ್ಲಾ ಇಷ್ಟವಿಲ್ಲ ಅವರಿಗೆ ಹೇಳಿಬಿಡು ಎನ್ನುತ್ತಾಳೆ. ಅವರು ಅಷ್ಟು ಪ್ರೀತಿಯಿಂದ ಕಳಿಸಿರುವಾಗ ನಾನು ಹೇಗೆ ಬೇಡ ಎನ್ನಲಿ ಎಂದು ರ...