Bengaluru, ಏಪ್ರಿಲ್ 23 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 7ನೇ ಎಪಿಸೋಡ್‌ ಕಥೆ ಹೀಗಿದೆ. ತಮ್ಮ ಮನೆಯ ಮೇಕೆಯನ್ನು ಹೇಗಾದರೂ ಮಾಡಿ ಉಳಿಸಿಕೊಡುವಂತೆ ವಿದ್ಯಾ ಮನವಿ ಮಾಡಿಕೊಳ್ಳುತ್ತಾಳೆ. ಒಂದು ಕಡೆ ವಿದ್ಯಾ ಅಳು, ಅವಳಿಗೆ ಕೊಟ್ಟ ಮಾತು, ಮತ್ತೊಂದು ಕಡೆ ಅಪ್ಪನ ಪ್ರೀತಿ ನಡುವೆ ಸಿಲುಕಿ ಭದ್ರೇಗೌಡ ಒದ್ದಾಡುತ್ತಾನೆ. ಮೇಕೆ ಉಳಿಸದಿದ್ದರೆ ವಿದ್ಯಾಗೆ ನೋವಾಗುತ್ತದೆ, ಅದನ್ನು ಉಳಿಸಲು ಹೋದರೆ ಅಪ್ಪ ನನ್ನ ಬಗ್ಗೆ ಬೇಸರ ಮಾಡಿಕೊಳ್ಳುತ್ತಾನೆ ಏನು ಮಾಡುವುದು ಎಂದು ಭದ್ರ ಯೋಚಿಸುತ್ತಾನೆ.

ಅದೇ ಸಮಯಕ್ಕೆ ಪೂಜೆ ಮುಗಿಯುತ್ತದೆ. ಮೇಕೆಯನ್ನು ಬಲಿ ಕೊಡಲು ಸಿದ್ಧತೆ ನಡೆಯುತ್ತದೆ. ಆದರೆ ಮೇಕೆ ತಲೆ ಒದರುವುದಿಲ್ಲ. ಇದರಿಂದ ಶಿವರಾಮೇಗೌಡ ಬೇಸರಗೊಳ್ಳುತ್ತಾನೆ. ಮೇಕೆ ತಲೆ ಒದರದಿದ್ದರೆ ಅದನ್ನು ಬಲಿ ಕೊಡುವುದಿಲ್ಲ ಆಗ ವಿದ್ಯಾ ಖುಷಿಯಾಗುತ್ತಾಳೆ ಎಂದು ಭದ್ರೇಗೌಡ ಅಂದುಕೊಳ್ಳುತ್ತಾನೆ. ಮೇಕೆ ಬಲಿ ಕೊಡದಿದ್ದರೆ ಖಂಡಿತ ಶಿವರಾಮೇಗೌಡನ ಮರ್ಯಾದೆ ಹಾಳ...