ಭಾರತ, ಮೇ 4 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 16ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನ ಮದುವೆ ವಿಚಾರದಲ್ಲಿ ಶಿವರಾಮೇಗೌಡ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ರಾಜೇಗೌಡನ ಜೊತೆ ಸಂಬಂಧ ಮುಂದುವರೆಸುತ್ತಿಲ್ಲ ಎಂದು ಮನೆಯವರ ಮುಂದೆ ಶಿವರಾಮೇಗೌಡ ಹೇಳುತ್ತಾನೆ. ಹಾಗಾದರೆ ನನ್ನ ಮಗಳು ವಿನಂತಿಯನ್ನು ಅಣ್ಣ ಒಪ್ಪಿದ್ದಾನೆ ಎಂದು ಸಾವಿತ್ರಿ ತಪ್ಪು ತಿಳಿಯುತ್ತಾಳೆ. ಭದ್ರ-ವಿನಂತಿ ಮದುವೆ ವಿಚಾರ ಮುಗಿದುಹೋದ ಅಧ್ಯಾಯ ಎಂದು ಶಿವರಾಮೇಗೌಡ ಹೇಳುತ್ತಾನೆ.

ಭದ್ರನಿಗೆ ನಾನು ಬೇರೆ ಕಡೆ ಹೆಣ್ಣು ನೋಡಿದ್ದೇನೆ. ಎಲ್ಲರೂ ನೋಡಲು ಹೋಗೋಣ ಎಂದು ಹೇಳುತ್ತಾನೆ. ರಾಜೇಗೌಡನ ಮನೆ ಸಂಬಂಧವೂ ಬೇಡ, ವಿನಂತಿಯೂ ಬೇಡ ಎಂದ ಮೇಲೆ ಈ ಶಿವರಾಮೇಗೌಡ ನೋಡಿರುವ ಆ ಹುಡುಗಿ ಯಾರಿರಬಹುದು ಎಂದು ಈಶ್ವರಿ ಯೋಚಿಸುತ್ತಾಳೆ. ಹೆತ್ತ ತಾಯಿಗೂ ಹೇಳದೆ ನನ್ನ ಮಗ ಏನು ಮಾಡಲು ಹೊರಟಿದ್ಧಾನೆ ಎಂದು ತಾಯಿ ಕೂಡಾ ಕುತೂಹಲ ವ್ಯಕ್ತಪ...