ಭಾರತ, ಮೇ 11 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 23ನೇ ಎಪಿಸೋಡ್‌ ಕಥೆ ಹೀಗಿದೆ. ಈ ಮದುವೆ ಇಷ್ಟವಿಲ್ಲ ಎಂದು ಭದ್ರನಿಗೆ ವಿದ್ಯಾ ಬರೆದ ಪತ್ರ ಈಶ್ವರಿ ಕೈ ಸೇರಿದೆ. ಈಶ್ವರಿ ಅದನ್ನು ಚೆಲುವನಿಗೆ ತಂದುಕೊಡುತ್ತಾಳೆ. ಮಗಳ ಮೇಲೆ ಕೋಪಗೊಂಡ ಚೆಲುವ ಮನೆಗೆ ಬಂದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಾಯುವ ನಾಟಕ ಮಾಡುತ್ತಾನೆ. ಜೊತೆಗೆ ಹೆಂಡತಿ ರತ್ನಳಿಗೂ ಸೀಮೆಎಣ್ಣೆ ಸುರಿದು ಇಬ್ಬರೂ ಸಾಯೋಣ ಎನ್ನುತ್ತಾನೆ. ಅಪ್ಪ ಮಾಡುತ್ತಿರುವುದು ನಾಟಕ ಎಂದು ಗೊತ್ತಾಗದೆ ವಿದ್ಯಾ, ಅವನ ಕಾಲಿಗೆ ಬಿದ್ದು ನೀನು ಹೇಳಿದಂತೆ ಕೇಳುತ್ತೇನೆ, ಈ ಮದುವೆ ಆಗುತ್ತೇನೆ ಎನ್ನುತ್ತಾಳೆ.

ವಿದ್ಯಾ ಜೊತೆ ಮದುವೆ ಫಿಕ್ಸ್‌ ಆದಾಗಿನಿಂದ ಭದ್ರ ಗೊಂದಲದಲ್ಲಿದ್ದಾನೆ. ಅದರಲ್ಲೂ ಬ್ಯೂಟಿ ಪಾರ್ಲರ್‌ ಹುಡುಗಿಯನ್ನು ವಾಪಸ್‌ ಕಳಿಸಿದ ನಂತರವಂತೂ ವಿದ್ಯಾಗೆ ಈ ಮದುವೆ ಇಷ್ಟವಿದೆಯೋ ಇಲ್ಲವೋ ಎಂಬ ಅನುಮಾನ ಭದ್ರನಿಗೆ ಕಾಡುತ್ತಿದೆ. ವಿದ್ಯಾಗೆ ಈ ಮದುವೆ ಇಷ್ಟವಿದ್ದರೆ ಮಾತ್ರ ನಾ...