Bangalore, ಏಪ್ರಿಲ್ 25 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 9ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನಿಗಾಗಿ ಮಾಡಿದ ಪೂಜೆ ಯಶಸ್ವಿಯಾಗುತ್ತದೆ. ಪೂಜಾರಿ ಮೈ ಮೇಲೆ ಬರುವ ದೇವಿ, ಮಗನ ಮದುವೆಯನ್ನು ಯಾವುದೇ ವಿಘ್ನ ಇಲ್ಲದೆ ನಡೆಸಿಕೊಡುವುದಾಗಿ ಶಿವರಾಮೇಗೌಡನಿಗೆ ಹೇಳುತ್ತಾಳೆ. ಭದ್ರೇಗೌಡ ತನ್ನ ಬಳಿ ಇದ್ದ ಕಾಲ್ಗೆಜ್ಜೆಯನ್ನು ವಿದ್ಯಾಗೆ ವಾಪಸ್ ಕೊಡುತ್ತನೆ. ಅವಳ ಮೇಲೆ ನನಗೆ ಮನಸ್ಸಾಗಿದೆ ಎಂದು ಕ್ವಾಟ್ಲೆ ಬಳಿ ಹೇಳಿಕೊಳ್ಳುತ್ತಾನೆ.

ಎಲ್ಲರೂ ಪೂಜೆ ಮುಗಿಸಿ ಮನೆಗೆ ಬರುತ್ತಾರೆ. ಭದ್ರೇಗೌಡನಿಗೆ ಮಲತಾಯಿ ಮೋಹನ ಕಡೆಯ ಸಂಬಂಧದಲ್ಲಿ ಹೆಣ್ಣು ನೋಡಿರುವುದಾಗಿ ಚಿಕ್ಕೇಗೌಡ ಹೇಳುತ್ತಾನೆ. ಒಂದೊಳ್ಳೆ ಸಂಬಂಧ ಬಂದಿದೆ. ನಾಳೆ ಏನೂ ಕೆಲಸ ಇಟ್ಟುಕೊಳ್ಳಬೇಡ ಹೋಗಿ ನೋಡಿಕೊಂಡು ಬರೋಣ ಎಂದು ಶಿವರಾಮೇಗೌಡ ಮಗನಿಗೆ ಹೇಳುತ್ತಾನೆ. ಆ ವಿಚಾರ ಕೇಳಿ ಭದ್ರ ಬೇಸರ ಮಾಡಿಕೊಳ್ಳುತ್ತಾನೆ. ಹೇಗಾದರೂ ಮಾಡಿ ಅಪ್ಪನಿಗೆ ತನ್ನ ಪ್ರೀತಿ ವಿಚಾರವನ್ನು ತಿಳಿಸಬೇಕು. ಅದಕ್ಕ...